ಬೆಂಗಳೂರು:’ದಿ ವಿಲನ್’ ಚಿತ್ರದಲ್ಲಿ ನಟಿಸಿದ್ದ ನಟಿ ಆ್ಯಮಿ ಜಾಕ್ಸನ್ ಅವರು, ತಮ್ಮ ಬಾಯ್ಫ್ರೆಂಡ್, ಉದ್ಯಮಿ ಜಾರ್ಜ್ ಪನಾಯೊಟೌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಬಗ್ಗೆ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಜನವರಿ 1. 2019 ನಮ್ಮ ಜೀವನದಲ್ಲಿ ಹೊಸ ಅಧ್ಯಾಯ. ಐ ಲವ್ ಯೂ. ಈ ಜಗತ್ತಿನಲ್ಲೇ ಅತ್ಯಂತ ಖುಷಿಯಾಗಿರುವಂತೆ ಮಾಡಿದ್ದಕ್ಕೆ ಥ್ಯಾಂಕ್ಸ್ ಎಂದು ಬರೆದುಕೊಂಡಿದ್ದಾರೆ . ಹಾಗೂ ಜಾರ್ಜ್ ಪನಯೌಟು ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಆ್ಯಮಿ ಜಾಕ್ಸನ್ ಅವರು ಶಿವರಾಜ್ ಕುಮಾರ್ ಹಾಗೂ ಸುದೀಪ್ ಅಭಿನಯದ ‘ದಿ ವಿಲನ್’, ರಜನಿಕಾಂತ್, ಅಕ್ಷಯ್ ಕುಮಾರ್ ಅಭಿನಯದ ‘2.0’ ಚಿತ್ರಗಳಲ್ಲಿ ನಟಿಸಿದ್ದರು.










