ಚಿಕ್ಕಮಗಳೂರು : ಹುಲಿ, ಜಿಂಕೆ ಚರ್ಮ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿ ಬಂಧನವಾಗಿರುವ ಘಟನೆ ನಗರದ ಇಂದಿರಾಗಾಂಧಿ ಬಡಾವಣೆಯಲ್ಲಿ ನಡೆದಿದೆ. ದಾವಣಗೆರೆ ಮೂಲದ ಷಣ್ಮುಗಂ ಬಂಧಿತ ಆರೋಪಿ . ಈತ ಹುಲಿ, ಜಿಂಕೆ ಚರ್ಮವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಅರಣ್ಯ ಸಂಚಾರಿದಳ ಅಧಿಕಾರಿ ಸುನೀಲ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯಿಂದ ಲಕ್ಷಾಂತರ ಬೆಲೆ ಬಾಳುವ ಒಂದು ಹುಲಿ ಚರ್ಮ ಹಾಗೂ ಜಿಂಕೆ ಚರ್ಮ ವಶಪಡೆದಿದ್ದಾರೆ.










