ನಿಶ್ಚಿತಾರ್ಥ ಮಾಡಿಕೊಂಡ ‘ದಿ ವಿಲನ್’ ಬೆಡಗಿ ಆ್ಯಮಿ ಜಾಕ್ಸನ್​… 

419
firstsuddi

ಬೆಂಗಳೂರು:’ದಿ ವಿಲನ್’​ ಚಿತ್ರದಲ್ಲಿ ನಟಿಸಿದ್ದ ನಟಿ ಆ್ಯಮಿ ಜಾಕ್ಸನ್​ ಅವರು, ತಮ್ಮ ಬಾಯ್​ಫ್ರೆಂಡ್, ಉದ್ಯಮಿ ​ಜಾರ್ಜ್ ಪನಾಯೊಟೌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.  ಈ ಬಗ್ಗೆ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಜನವರಿ 1. 2019 ನಮ್ಮ ಜೀವನದಲ್ಲಿ ಹೊಸ ಅಧ್ಯಾಯ. ಐ ಲವ್ ಯೂ. ಈ ಜಗತ್ತಿನಲ್ಲೇ ಅತ್ಯಂತ ಖುಷಿಯಾಗಿರುವಂತೆ ಮಾಡಿದ್ದಕ್ಕೆ ಥ್ಯಾಂಕ್ಸ್  ಎಂದು ಬರೆದುಕೊಂಡಿದ್ದಾರೆ . ಹಾಗೂ ಜಾರ್ಜ್ ಪನಯೌಟು  ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಆ್ಯಮಿ ಜಾಕ್ಸನ್​  ಅವರು ಶಿವರಾಜ್​ ಕುಮಾರ್​ ಹಾಗೂ ಸುದೀಪ್​ ಅಭಿನಯದ ‘ದಿ ವಿಲನ್’, ರಜನಿಕಾಂತ್​, ಅಕ್ಷಯ್​ ಕುಮಾರ್​ ಅಭಿನಯದ ‘2.0’  ಚಿತ್ರಗಳಲ್ಲಿ ​ನಟಿಸಿದ್ದರು.