ಪುನೀತ್‌ ರಾಜ್  ಕುಮಾರ್ ಮನೆಯಲ್ಲಿ ಐಟಿ ತನಿಖೆ  ಅಂತ್ಯ…

529
firstsuddi

ಬೆಂಗಳೂರು: ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಅವರ ಮನೆಯಲ್ಲಿ ಐಟಿ ಅಧಿಕಾರಿಗಳ ತನಿಖೆ  ಅಂತ್ಯವಾಗಿದ್ದು, ಅಧಿಕಾರಿಗಳು ಪುನೀತ್ ಅವರ ಮನೆಯಿಂದ ತಡರಾತ್ರಿ ತೆರಳಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪುನೀತ್ ರಾಜ್ ಕುಮಾರ್  ಅವರು   ಆದಾಯ ತೆರಿಗೆ ಅಧಿಕಾರಿಗಳು ಅವರ ಕೆಲಸವನ್ನು ಅವರು ಮಾಡಿದ್ದಾರೆ.  ಒಬ್ಬ ಜವಾಬ್ದಾರಿಯುತ  ನಾಗರೀಕನಾಗಿ ಐಟಿ ತನಿಖೆಗೆ ಸಹಕಾರ ನೀಡಿದ್ದೇನೆ. ನನ್ನ ಮನೆಯಲ್ಲಿ ಐಟಿ ತನಿಖೆ ಮುಗಿದಿದೆ.ಇಂದು ಹುಬ್ಬಳ್ಳಿಯಲ್ಲಿ  ನಟಸಾರ್ವಭೌಮದ ಆಡಿಯೊ ರಿಲೀಸ್ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದು ಪುನೀತ್‌ ಅವರು ತಿಳಿಸಿದ್ದಾರೆ