ಡಾ. ಎಂ.ಎಸ್. ಮಣಿ
ಇತ್ತೀಚೆಗೆ ’ಇಂದು ಸಂಜೆ’ ಪತ್ರಿಕೆಯ ಮಾಲೀಕರ ಪುತ್ರಿ ಚೈತ್ರಾ ಅವರ ವಿವಾಹ ಇಸ್ಕಾನ್ ಎದುರಿನ ಎಸ್.ಎಲ್.ಆರ್ ಕಲ್ಯಾಣ ಮಂಟಪದಲ್ಲಿ ನಡೆಯಿತು. ಬಹಳ ವರ್ಷಗಳ ನಂತರ ಮಿಂಚು ಕತ್ತಿನಲ್ಲಿ ಕ್ಯಾಮೆರಾ ನೇತಾಡುವುದನ್ನು ಕಂಡಾಗ ಅವರೊಳಗಿನ ಕ್ರಿಯಾಶೀಲತೆಗೆ ಬೆರಗಾದೆ.ಫೋಟೋಗ್ರಫಿಯಲ್ಲಿ ತನಗಿಂತ ಕಿರಿಯರಿಗೆ ಪ್ರಶಸ್ತಿ, ಪುರಸ್ಕಾರ ಲಭಿಸಿದಾಗಲೂ ಕೊರಗದೆ ಸಮಚಿತ್ತರಾಗಿ ಉಳಿದ ಭಾವುಕ ಜೀವಿ ಇವರು.ಇವರಲ್ಲಿರುವ ತಾಳ್ಮೆಯ ಗುಣ ಗಮನಿಸಿಯೇ ಮದುವೆಯ ಫೋಟೋ ಕ್ಲಿಕ್ಕಿಸುವ ಹೊಣೆಯನ್ನುಹೊರಿಸಿರಬೇಕು. ಮುಹೂರ್ತ ಮುಗಿದು ಊಟಕ್ಕೆ ಕುಳಿತಾಗಲೂ ಎಂದಿನಂತೆ ಮಂದಸ್ಮಿತರಾಗಿರಲಿಲ್ಲ. ತಡೆಯಲಾರದೇ ಕೇಳಿಯೇಬಿಟ್ಟೆ. ಆಗವರು, ಸರ್, ನಾನು ಕಳೆದವಾರ ಕೊಂಡಿದ್ದ ಚಪ್ಪಲಿ ಕಾಣುತ್ತಿಲ್ಲ ಎಂದರು. ನೀಲಿ ಆಗಸದ ಬಣ್ಣ ಹೊಂದಿದ್ದ ಚಪ್ಪಲಿಯ ಮೇಲೆ ಶ್ರೀನಿವಾಸ್‌ಗೆ ಬಲು ಮೋಹ.ಜ್ವರದಿಂದ ಬಳಲಿ ಚೇತರಿಸಿಕೊಳ್ಳುತ್ತಿರುವಾಗಲೇ ಚಪ್ಪಲಿ ಕಳೆದು ಹೋಯಿತಲ್ಲಾ… ಎಂದು ಬೇಸರಕ್ಕೊಳಗಾದರು. ಆದರೂ, ಛಲ ಬಿಡದ ತ್ರಿವಿಕ್ರಮನಂತೆ ಬರಿಗಾಲಲ್ಲೇ ಮೂರು ದಿನ ಓಡಾಡಿ ಬಿಟ್ಟಿದ್ದಾರೆ. ಬಹುಶಃ ಕಲ್ಯಾಣ ಮಂಟದ ಬಳಿಯೇ ಕಾದಿದ್ದರೆ, ಬಿಟ್ಟು ಹೋದವರ ಚಪ್ಪಲಿ-ಬೂಟು ಸಿಗಬಹುದಿತ್ತು.
ಇದಕ್ಕೂ ಒಂದು ತಿಂಗಳು ಮುಂಚೆ ಶಿವಾಜಿನಗರ ಸರ್ಕಲ್‌ನಲ್ಲಿರುವ ಮಾರಿಯಮ್ಮ ದೇಗುಲದ ಕಡೆ ಸಾಗುತ್ತಿದ್ದೆವು. ನಾನಾಗ ದೇಗುಲದೊಳಗೆ ಹೋಗಿಬರೋಣ ಎಂದು ಕರೆದೆ. ಆಗವರು ನೀಡಿದ ಉತ್ತರ ಚಿಕಿತಗೊಳಿಸಿತು. ’ದೇಗುಲದೊಳಗಡೆ ಬಂದರೆ, ಹೊಸ ಬೂಟು ಕಳುವಾಗುತ್ತದೆ’ಎಂದಿದ್ದರು. ವ್ಯಂಗ್ಯಭರಿತ ನಗುಬೀರಿ ದೇಗುಲದೊಳಗೆ ಹೋದೆ. ಹೊರಬರುವಾಗ ತಲೆತಗ್ಗಿಸುವ ಸರದಿ ನನ್ನದಾಗಿತ್ತು. ಕಾರಣ,ಅಲ್ಲೊಬ್ಬರು ಕಳುವಾಗಿದ್ದ ತಮ್ಮ ಬೂಟುಗಳನ್ನು ತಡಕಾಡುತ್ತಿದ್ದರು.
ಮದುವೆ-ಮುಂಜಿ, ಮಂದಿರ-ಮಸೀದಿ-ಚರ್ಚುಎಲ್ಲಿಗೆ ಹೋದರೂ ನಮ್ಮ ಚಪ್ಪಲಿ, ಬೂಟುಕಳುವಾಗುತ್ತವೆ. ಹೀಗಾಗಿ ಈಶ್ವರ, ಅಲ್ಲಾಹು,ಏಸಪ್ಪ, ಬುದ್ಧ ಯಾರ ಮುಂದೆ ನಿಂತಿದ್ದರೂ ಹೊರಬಿಟ್ಟ ಬೂಟು, ಚಪ್ಪಲಿ ಕಳುವಾಗಿಬಿಟ್ಟರೆ ಎಂಬ ಆತಂಕ ಇದ್ದೇ ಇರುತ್ತದೆ. ಶುಕ್ರವಾರ ಅಮ್ಮನವರ ದೇಗುಲ – ಮಸೀದಿ, ಭಾನುವಾರ ಚರ್ಚುಗಳ ಬಳಿ ಬೂಟು-ಚಪ್ಪಲಿಗಳು ಕಣ್ಮರೆಯಾಗುವುದು ಸಾಮಾನ್ಯ ಸಂಗತಿಯಾಗಿದೆ. ಕಾರಣ, ಈ ದಿನಗಳಲ್ಲಿ ಜನಸ್ತೋಮ ಹೆಚ್ಚಿರುತ್ತದೆ. ಅದರಲ್ಲಿಯೂ ತಮಗೆಬೇಕಾದ ಬ್ರಾಂಡ್ ಮತ್ತು ಕಲರ್ ನ ಬೂಟು,ಚಪ್ಪಲಿಯನ್ನು ಆಯ್ಕೆ ಮಾಡಿಕೊಳ್ಳಬಹುದು.ಜೊತೆಗೆ ಯಾವ ಸೈಜಿನವು ಬೇಕಾದರೂ ಹೊತ್ತೊಯ್ಯುವ ಅವಕಾಶವೂ ಇರುತ್ತದೆ.ಮಂದಿರ-ಮಸೀದಿ-ಚರ್ಚುಗಳಲ್ಲಿ ದೇವರ ನಾಮಜಪಿಸಿ ಹೊರಬಂದ ಕೂಡಲೇ ಬೂಟು, ಚಪ್ಪಲಿ ಕಾಣದಿದ್ದರೆ, ಚಿಂತೆಗೊಳಗಾಗಲೇಬೇಕಾಗುತ್ತದೆ.ದೇಶದ ಉದ್ದಗಲಕ್ಕೂ ಇರುವ ಯಾವುದೇ ಯಾತ್ರಾ ಸ್ಥಳಗಳಿಗೆ ಭೇಟಿ ಕೊಟ್ಟಾಗ, ಉತ್ತಮ ಕಂಪನಿಯ ಬೂಟು-ಚಪ್ಪಲಿಗಳು ಕಳುವಾಗುವ ಸಾಧ್ಯತೆಗಳೇ ಹೆಚ್ಚಾಗಿವೆ. ಉತ್ತಮ ಕಂಪನಿಯ ಬೂಟು-ಚಪ್ಪಲಿ ಎಗರಿಸಿಕೊಂಡು ಹೋಗಲುಬೂಟುಕಳ್ಳರ ಪಡೆಯೇ ಅಲ್ಲಿ ಬೀಡುಬಿಟ್ಟಿರುತ್ತದೆ.
ಭಾರತದ ಅತ್ಯಂತ ಪ್ರಖ್ಯಾತ, ಕುಖ್ಯಾತ ಬೂಟು-ಚಪ್ಪಲಿ ಮಾರುಕಟ್ಟೆಯೆಂದರೆ ಅದುಮುಂಬೈನ ಪೂರ್ವದಲ್ಲಿರುವ ’ಕುರ್ಲಾ ಬಜಾರ್’.ಇದೊಂಥರ ಬೆಂಗಳೂರಿನಲ್ಲಿ ನಡೆಯುವ ಸಂಡೇಬಜಾರ್, ಅಂದರೆ ಚೋರ್ ಬಜಾರ್ ಇದ್ದಂತೆ.ಇಲ್ಲಿ ಚೌಕಾಸಿ ವ್ಯಾಪಾರ. ಸಾವಿರದಿಂದ ನೂರಿನ್ನೂರಕ್ಕೆ ವ್ಯಾಪಾರ ಫೈಸಲ್. ಕಳುವುಮಾಲು ಕೊಳ್ಳಲು ಸ್ತ್ರೀ-ಪುರುಷ ಎಂಬ ಬೇಧ-ಭಾವ ಇಲ್ಲಿಲ್ಲ. ಎಲ್ಲರೂ ಖರೀದಿಯ ಭರಾಟೆಯಲ್ಲಿ ಮುಗಿಬಿದ್ದಿರುತ್ತಾರೆ. ಕಳೆದ ಮಾಸಕಾನೂನು ಪದವಿ ಓದುವ ನನ್ನ ಹಿರಿಮಗ ಬೂಟುಬೇಕೆಂದು ಹಠ ಹಿಡಿದ. ಅದು ಬ್ರ್ಯಾಂಡೆಡ್ಬೂಟೇ ಬೇಕೆಂದ. ನನಗಾಗ ಪತ್ರಕರ್ತ ರಾಮಕೃಷ್ಣ ಮೂರ್ತಿ ಹೇಳಿದ ಯು.ಎಸ್.ಎಬೂಟಿನ ನೆನಪಾಯಿತು. ಯು.ಎಸ್.ಎ ಬೂಟು ಎಂದಾಗ, ಅದು ಅಮೆರಿಕದ ಉತ್ಪನ್ನ ಎಂದೇ ಭಾವಿಸಿರುತ್ತೇವೆ. ಆದರೆ, ಇದು ನಮ್ಮದೇ ಮುಂಬೈನ ಪಶ್ಚಿಮ ಪ್ರದೇಶದಲ್ಲಿ ತಯಾರಾಗುವ ಬೂಟುಗಳು. ಇಲ್ಲಿ ಯುಎಸ್‌ಎ ಎಂದರೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಅಲ್ಲ. ಅದು ಉಲ್ಲಾಸ್ ನಗರ ಸಿಂದಿ ಅಸೋಸಿಯೇಷನ್.ಇದನ್ನೇ ಇಲ್ಲಿನವರು ಯುಎಸ್‌ಎ ಎಂದು ಕಳಪೆ ಮಾಲಿಗೂ ಇಟ್ಟು ಮಾರಾಟ ಮಾಡಿಬಿಡುತ್ತಾರೆ.ಇವರ ಮಾರಾಟದ ತಂತ್ರ ಮೋಸ ಎಂದು ನಮಗನ್ನಿಸಬಹುದು. ಆದರೆ, ಅವರಿಗದು ಹೊಟ್ಟೆಪಾಡಾಗಿದೆ. ಇಷ್ಟಕ್ಕೂ ನನ್ನ ಮಗ ಯುಎಸ್‌ಎ ಬೂಟು ಖರೀದಿಸಲಿಲ್ಲ. ಅವನುಪೂಮಾ ಬೂಟು ಖರೀದಿಸಲು ಮುಂದಾಗಿದ್ದ.ಇಂದಿರಾ ನಗರದ ಪೂಮಾ ಮಳಿಗೆ ಒಳಾಂಗಣ ವಿನ್ಯಾಸಕ್ಕೆ ಒಳಗಾಗಿತ್ತು. ಹೀಗಾಗಿ ಆಕರ್ಷಕವಾಗಿದ್ದ ಅಡಿದಾಸ್ ಬೂಟನ್ನುಇಷ್ಟವಿಲ್ಲದೆ ಬಲವಂತಕ್ಕೆ ಖರೀದಿ ಮಾಡಿದ.ಅಡಿದಾಸ್ ಬೂಟನ್ನು ಎಲ್ಲಿ ಧರಿಸುವುದಿಲ್ಲವೋ ಎಂದು ಪೂಮಾ-ಅಡಿದಾಸ್ ಬೂಟಿನಸ್ವಾತಂತ್ರ್ಯ ಪೂರ್ವದ ಇತಿಹಾಸವನ್ನು ಹೇಳುತ್ತಸಾಗಿದೆ.
ಪೂಮಾ-ಅಡಿದಾಸ್ ನ ಮಾಲೀಕರಿಬ್ಬರೂ ಒಡಹುಟ್ಟಿದವರು. ಅಡಿದಾಸ್ ೧೯೪೭ ರಲ್ಲಿಆರಂಭವಾದ ಕಂಪನಿ. ೧೯೪೭ ರಲ್ಲಿ ದೇಶಕ್ಕೆಸ್ವಾತಂತ್ರ್ಯ ದೊರೆತು ಇಬ್ಬಾಗ ಆದಂತೆ, ವಿಶ್ವದಪ್ರಸಿದ್ಧ ಬೂಟು ತಯಾರಿಕೆ ಕಂಪನಿಯ ಪಾಲುದಾರರಾದ ಅಣ್ಣ-ತಮ್ಮಂದಿರು ಕೂಡ ಇಬ್ಭಾಗವಾದರು. ಕ್ರಿಸ್ಟೋಫ್ ವಾನ್ ವ್ಹಿಲೇಮ್ಡಸ್ಲರ್ ಬೂಟು ತಯಾರಿಕೆ ಕಂಪನಿಯೊಂದರಲ್ಲಿ ಕಾರ್ಮಿಕನಾಗಿದ್ದನು. ಈತನ ಪತ್ನಿ ಪೌಲಿನ್ಜರ್ಮನಿಯ ಜೊತೆಗೆ ನರಕ್‌ನಲ್ಲಿ ಸಣ್ಣದೊಂದು ಇಸ್ತ್ರಿ ಅಂಗಡಿ ಇಟ್ಟುಕೊಂಡಿದ್ದರು. ಇವರುಗಳಿಗೆ ಇಬ್ಬರು ಮಕ್ಕಳಿದ್ದರು. ಅವರೇ ಅಡಾಲ್ಫ್ ಮತ್ತುರುಡಾಲ್ಫ್. ಇವರುಗಳು ಬದುಕು ದೂಡಲುಬಲು ಕಷ್ಟಪಡುತ್ತಿದ್ದರು. ಬಡತನದ ಸಮಸ್ಯೆಯಕಾರಣ ರುಡಾಲ್ಪ್ ಓದನ್ನು ಅರ್ಧಕ್ಕೇ ನಿಲ್ಲಿಸಿದ.ಕುಟುಂಬಕ್ಕೆ ನೆರವಾಗಲು ತನ್ನ ತಂದೆಯೊಂದಿಗೆ ಬೂಟು ಕಾರ್ಖಾನೆಗೆ ದುಡಿಯಲು ಹೋಗಲಾರಂಭಿಸಿದ. ನಂತರ ಸೇನೆಗೆ ಸೇರಿ,ಮೊದಲ ಮಹಾಯುದ್ಧದಲ್ಲಿ ಪಾಲ್ಗೊಂಡು ಹಿಂತಿರುಗಿ ಬಂದನು. ಆಗ ಬೂಟುಕಾರ್ಖಾನೆಯ ಮಾಲೀಕರು ರುಡಾಲ್ಫ್‌ನಿಗೆ ಉನ್ನತ ಹುದ್ದೆ ಕೊಟ್ಟು ಕೂರಿಸಿದರು. ಮುಂದೆ ಚರ್ಮದ ಸಗಟು ವ್ಯಾಪಾರದಲ್ಲಿ ತೊಡಗಿಸಿಕೊಂಡನು. ಇದರ ನಡುವೆ ಅಡಾಲ್ಫ್ತನ್ನ ತಾಯಿಯ ಇಸ್ತ್ರಿ ಅಂಗಡಿ ನೋಡಿಕೊಂಡು ಬೂಟು ತಯಾರಿಸಲು ಮುಂದಾದನು.ಇವನೊಂದಿಗೆ ರುಡಾಲ್ಫ್ ಕೂಡಕೈಜೋಡಿಸಿದ್ದರಿಂದ ’ಡಸ್ಲಾರ್’ ಬೂಟು ಕಂಪನಿ ಬೆಳೆಯಲಾರಂಭಿಸಿತು.
ಪರಂಪರಾನುಗತವಾಗಿ ನಡೆಸಿಕೊಂಡು ಬರುತ್ತಿದ್ದ ಇಸ್ತ್ರಿ ಅಂಗಡಿಯಲ್ಲಿ ಆರಂಭವಾದ’ಡಸ್ಲರ್’ ಕಂಪನಿಯ ವೃದ್ಧಿಗಾಗಿ ಸಹೋದರರಿಬ್ಬರು ಹಗಲಿರುಳೆನ್ನದೆ ದುಡಿದರು.ಬಹುಶಃ ೧೯೩೬ ರ ಒಲಿಂಪಿಕ್ಸ್ ಇರಬೇಕು.ಅಲ್ಲಿಗೆ ಅಡಾಲ್ಫ್ ತಮ್ಮ ಕಂಪನಿ ಶೂಗಳನ್ನುಹೊತ್ತೊಯ್ದನು. ಅಲ್ಲಿದ್ದ ಅಮೆರಿಕದ ಓಟಗಾರರು ತಮ್ಮ ಕಂಪನಿಯ ಶೂಗಳನ್ನು ಧರಿಸಿ ಓಡುವಂತೆ ಮನವೊಲಿಸಿದನು. ಅದೇನೊ ಅದೃಷ್ಟವೋ’ಡಸ್ಲರ್’ ಶೂ ಧರಿಸಿದ್ದ ನಾಲ್ಕು ಆಟಗಾರರು ಚಿನ್ನದ ಪದಕ ಗೆದ್ದೇಬಿಟ್ಟರು. ಆಗ ಡಸ್ಲರ್ಶೂಗಳು ಜಗತ್ತಿನಾದ್ಯಂತಮಾರಾಟಕ್ಕೊಳಗಾದವು. ವಿಶ್ವದ ಕ್ರೀಡಾತರ ಬೇತುದಾರರೆಲ್ಲರೂ ಡಸ್ಲರ್ ಶೂಗಳನ್ನೇ ಖರೀದಿಸಲು ಕ್ರೀಡಾಪಟುಗಳಿಗೆ ಸೂಚಿಸಿದರು.ಮೊದಲ ಮಹಾಯುದ್ಧಕ್ಕೆ ಮೊದಲೇ ಅಡಾಲ್ಫ್-ರುಡಾಲ್ಫ್ ಸಹೋದರರು ವರ್ಷಕ್ಕೆ ಎರಡು ಲಕ್ಷ ಶೂಗಳನ್ನು ಮಾರಾಟಮಾಡಿಬಿಟ್ಟರು.
ದುರಾದೃಷ್ಟವಶಾತ್ ಎರಡನೇ ಮಹಾಯುದ್ಧದ ನಂತರ ಅಡಾಲ್ಫ್-ರುಡಾಲ್ಫ್ ಸಹೋದರರ ಮಧ್ಯೆ ಅಭಿಪ್ರಾಯ ಬೇಧ ಉಂಟಾಗಿ ಬೇರೆ ಬೇರೆಯಾದರು. ರುಡಾಲ್ಫ್ ಮೊದಲಿಗೆ ’ರುಡಾ’ಎಂಬ ಕಂಪನಿಯನ್ನು ಆರಂಭಿಸಿದನು. ನಂತರ ಅದೇನು ಅನಿಸಿತೋ ಅದನ್ನು ’ಪೂಮಾ’ ಎಂದು ಬದಲಾಯಿಸಿಬಿಟ್ಟ. ಇದೇ ರೀತಿ ಅಡಾಲ್ಫ್ ಕೂಡ’ಅಡಿದಾಸ’ ಎಂಬ ಹೆಸರಿನೊಂದಿಗೆ ಹೊಸಕಂಪನಿ ಆರಂಭಿಸಿದನು. ಇದನ್ನು ಇಲ್ಲಿಗೇ ಇವರಿಬ್ಬರೂ ನಿಲ್ಲಿಸಲಿಲ್ಲ. ತಮ್ಮ ತಮ್ಮ ಬ್ರ್ಯಾಂಡ್ಶೂಗಳನ್ನು ಮಾರುಕಟ್ಟೆಯಲ್ಲಿ ಜನಪ್ರಿಯಗೊಳಿಸಲು ಪೈಪೋಟಿಗೆ ಬಿದ್ದರು.ಇವರ ಪೈಪೋಟಿ ದ್ವೇಷಕ್ಕೆ ತಿರುಗಿ, ತಾವು ವಾಸವಿದ್ದ ಊರನ್ನೇ ಎರಡು ಭಾಗಮಾಡಿಬಿಟ್ಟರು. ಸಾಲದ್ದಕ್ಕೆ ಅಲ್ಲಿದ್ದ ಫುಟ್‌ಬಾಲ್ಕ್ಲಬ್‌ನ್ನು ವಿಭಜಿಸಿಬಿಟ್ಟರು.
ತಾವಿದ್ದ ಊರು, ಮನೆ, ಕ್ಲಬ್ಬು, ಕಾರ್ಖಾನೆ ಎಲ್ಲವೂ ಇಬ್ಭಾಗಗೊಂಡು ಸಮಸ್ಯೆಗಳು ಸೃಷ್ಟಿಯಾದವು. ಆದರೂ, ಇವರಿಬ್ಬರು ಬದುಕಿರುವವರೆಗೂ ರಾಜಿ ಆಗಲೇ ಇಲ್ಲ. ಆದರೆ ಮೃತಪಟ್ಟ ನಂತರ ಇವರಿಬ್ಬರನ್ನು ಒಂದೇ ಕಡೆಸಮಾಧಿ ಮಾಡಲಾಯಿತು. ಇದು ಇತಿಹಾಸದ ಪುಟಗಳಲ್ಲಿ ಅಡಗಿದ್ದ ಕುಲಕಸುಬು ರಹಿತ ಸಹೋದರರಿಬ್ಬರ ಸಾಹಸಗಾಥೆ.
ಇರಲಿ, ಚೋರ್‌ಬಜಾರ್‌ನಲ್ಲಿ ಬೂಟು-ಚಪ್ಪಲಿಮಾತ್ರವಲ್ಲ, ಬಟ್ಟೆ, ಪಾತ್ರೆ, ಎಲೆಕ್ಟ್ರಾನಿಕ್-ಮೆಕ್ಯಾನಿಕ್, ಹಾರ್ಡ್‌ವೇರ್, ಸಾಫ್ಟ್‌ವೇರ್ಉಪಕರಣ ಸೇರಿದಂತೆ ಸಕಲವೂ ದೊರೆಯುತ್ತವೆ. ಇವೆಲ್ಲವೂ ಪೊಲೀಸರ ನೆರಳಲ್ಲೇಪ್ರತಿ ಭಾರುವಾರ ಜರುಗುತ್ತವೆ. ಇದುವರೆಗೂ ನಮ್ಮ ದೇಶದಲ್ಲಿ ಬೂಟು ಕಳುವಾಯಿತೆಂದುದೂರು ಕೊಟ್ಟವರೇ ಇಲ್ಲ. ಹೀಗೆ ನಿಖರ ದೂರು ಇಲ್ಲವಾದ್ದರಿಂದ, ಬೂಟು-ಚಪ್ಪಲಿ ಕಳ್ಳ ಸಿಕ್ಕಾಗದಂಡ ವಿಧಿಸಿ ಕಳುಹಿಸಲಾಗುತ್ತದೆ. ಬ್ರ್ಯಾಂಡ್ಹೆಸರಲ್ಲಿ ಬೂಟು-ಚಪ್ಪಲಿ ನಕಲು ಮಾಡಿಮಾರುವಾಗ ಮಾತ್ರ ಕಂಪನಿಗಳವರು ಕಾನೂನುಕ್ರಮಕ್ಕೆ ಮುಂದಾಗುವರು.
ಕೆಲವು ಕಡೆ ಬೂಟು-ಚಪ್ಪಲಿ ಕಳ್ಳರು ಪ್ರವಾಸ ಆಯೋಜಿಸುವ ಏಜೆಂಟ್ ಅಥವಾ ಬಸ್ಸಿನ ಚಾಲಕನೊಂದಿಗೆ ಕೈಜೋಡಿಸಿರುತ್ತಾರೆ. ಕಾರಣ,ಪ್ರವಾಸ ಹೊರಡುವ ಪ್ರಯಾಣಿಕರು ಉತ್ತಮ ಕಂಪನಿಯ ಬೂಟು-ಚಪ್ಪಲಿ ಧರಿಸಿರುತ್ತಾರೆ.ಒಂದು ಪ್ರವಾಸದಲ್ಲಿ ಕನಿಷ್ಟ ಒಂದು ಜೊತೆ ಅಥವಾ ಚಪ್ಪಲಿ ಕಳುವಾಗಿಯೇ ತೀರುತ್ತವೆ.ಮತ್ತದೇ ಬಸ್ಸಿನಲ್ಲಿಯೇ ಅಥವಾ ಬೇರೊಂದುಬಸ್ಸಿನಲ್ಲಿಯೊ ಬೂಟು ಬಜಾರ್ ತಲುಪಿರುತ್ತದೆ.
ಎಚ್ಚರ! ’ಮನೆಯೊಳಗಡೆ ನಾಯಿ ಇದೆ’ಎಂಬಂತೆ, ’ಎಚ್ಚರ! ಚಪ್ಪಲಿ ಕಳ್ಳರಿದ್ದಾರೆ’ ಎಂಬಬೋರ್ಡು ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷವಾಗಿದೇಗುಲದ ಬಳಿ ಇದ್ದೇ ಇರುತ್ತದೆ. ಕಳೆದುಕೊಂಡಬೂಟಿ-ಚಪ್ಪಲಿ ಹುಡುಕಿಕೊಟ್ಟವರಿಗೆ ಸೂಕ್ತಬಹುಮಾನ ನೀಡಲಾಗುವುದೆಂದು ಯಾರೂ ಕೋರಿಕೊಂಡವರಿಲ್ಲ. ಬಹುಶಃ ಕೋರಿಕೊಂಡರೆಸಿಗಬಹುದು. ನಮ್ಮವರು ಬೂಟು-ಚಪ್ಪಲಿಕಳುವಾದರೆ ಶುಭವಾಗುತ್ತದೆ ಎಂಬ ಮೂಢನಂಬಿಕೆಯಿಂದ ಮೌನಕ್ಕೆಶರಣಾಗಿದ್ದಾರೆ. ಬೂಟು-ಚಪ್ಪಲಿ ಕದಿಯುವವರಿಗೆ ತಿರುಪತಿಯಾದರೂ ಒಂದೆ,ಧರ್ಮಸ್ಥಳವಾದರೂ ಒಂದೆ. ಕಳುವು ಮಾಡುವುದೇ ಅವರ ವೃತ್ತಿ.
ಬೂಟು-ಚಪ್ಪಲಿ ಕಳೆದುಕೊಂಡವರು ಯಾರೂ ಪೊಲೀಸರಿಗೆ ದೂರು ಕೊಡುವುದಿಲ್ಲ. ತಮ್ಮತಮ್ಮಬೂಟು-ಚಪ್ಪಲಿಗಳ ಬಗ್ಗೆ ತಾವೇ ಎಚ್ಚರ ವಹಿಸಬೇಕು. ಒಂದು ಕಡೆ ದೇವರನ್ನು,ಇನ್ನೊಂದು ಬೂಟು-ಚಪ್ಪಲಿಯನ್ನು ನೋಡಿ ಸಮಾಧಾನ ಪಟ್ಟುಕೊಳ್ಳುವವರು ಇದ್ದಾರೆ.ಕೆಲವು ಕಡೆ ದುಭಾರಿ ವಾಚು, ಚೈನು, ಭೂಟುಧರಿಸಿ ದೇಗುಲಗಳಿಗೆ ಬರಬೇಡಿ ಎಂಬಬೋರ್ಡನ್ನು ತೂಗು ಹಾಕಿರುತ್ತಾರೆ.
ಮಂದಿರ-ಮಸೀದಿಗಳ ಬಳಿ ಬೂಟು-ಚಪ್ಪಲಿ ಕದಿಯುವವರಿಗೆ ಕಿಂಚಿತ್ತೂ ಮೂಢನಂಬಿಕೆ ಇರುವುದಿಲ್ಲ. ಇವರಿಗೆ ಬೂಟು-ಚಪ್ಪಲಿ ಕದಿಯುವುದು ಪ್ರಯಾಸ ಇಲ್ಲದೆ,ಅನಾಯಾಸವಾಗಿ ದುಡ್ಡು ಮಾಡುವ ವೃತ್ತಿಯಾಗಿದೆ. ಮಂಗಗಳೂ ಕೂಡ ತಮಗಿಷ್ಟ ಬಂದಿದ್ದನ್ನು ಹೊತ್ತು ಸಾಗುತ್ತಿರುತ್ತವೆ. ಅದೇ ರೀತಿಮನುಷ್ಯನೂ ಆಗಿಬಿಟ್ಟಿದ್ದಾನೆ. ಹಾಗಂತ,ಮಂಗಗಳನ್ನು ಬಿಟ್ಟುಬಿಡುವಂತೆ ಮನುಷ್ಯರನ್ನು ಬಿಡುವುದಿಲ್ಲ. ಮಂಗಗಳಿಗೆ ಕಾನೂನು – ನಿಯಮಯಾವುದೂ ಇರುವುದಿಲ್ಲ. ಆದರೆ, ಮನುಷ್ಯನಿಗೆಇದೆ. ತನ್ನದಲ್ಲದ ವಸ್ತುವಿಗೆ ಮನುಷ್ಯ ಆಸೆಪಡಬಾರದು. ಪರರ ವಸ್ತುಗಳನ್ನು ಕಳುವು ಮಾಡಬಾರದು.










