ಭಾರತ್ ಬಂದ್ : ಏನಿರುತ್ತೆ… ? ಏನಿರಲ್ಲ…?

211
firstsuddi

ಬೆಂಗಳೂರು :ರಸ್ತೆ ಸುರಕ್ಷತಾ ತಿದ್ದುಪಡಿ ಮಸೂದೆ, ಮೋಟಾರು ವಾಹನ ಮಸೂದೆ, ಕೇಂದ್ರದ ಕಾರ್ಮಿಕ ವಿರೋಧಿ ನೀತಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾರ್ಮಿಕ ಸಂಘಟನೆಗಳು ದೇಶಾದ್ಯಂತ ಮಂಗಳವಾರ ಹಾಗೂ ಬುಧವಾರ ಎರಡು ದಿನ ಭಾರತ್ ಬಂದ್​ ಗೆ ಕರೆ ನೀಡಿದೆ.  ಈ ಹಿನ್ನೆಲೆಯಲ್ಲಿ ಯಾವ ಸೇವೆಗಳು ಇರುತ್ತೆ ಮತ್ತು ಯಾವ ಸೇವೆಗಳು ಇರಲ್ಲ ಎಂಬುದನ್ನು ಈ ಕೆಳಕಂಡಂತೆ ಕಾಣಬಹುದು. 

ಏನಿರುತ್ತೆೆ?

  •  ಆಸ್ಪತ್ರೆ, ಮೆಡಿಕಲ್ ಶಾಪ್, ಸೇವೆ ಸಿಗಲಿದೆ.
  • ಹಾಲು,  ತರಕಾರಿ, ಪೇಪರ್, ಸೇವೆ ಸಿಗಲಿದೆ.
  • ಪೆಟ್ರೋಲ್ ಬಂಕ್‌ಗಳು ತೆರೆದಿರಲಿವೆ.
  •  ಮೆಟ್ರೋ ರೈಲು ಸಂಚಾರ  ಇರಲಿದೆ.
  •  ಆ್ಯಂಬುಲೆನ್ಸ್ ಸೇವೆ ಸಿಗಲಿದೆ. 
  • ಹೊಟೇಲ್‌ ಗಳು  ಎಂದಿನಂತೆ ತೆರೆಯಲಿವೆ. 

ಏನಿರಲ್ಲ?

  •  ಬಿಎಂಟಿಸಿ, ಕೆಎಸ್‍ಆರ್ ಟಿಸಿ ಬಸ್ ಸೇವೆ.
  •  ಬಸ್, ಆಟೋ ಟ್ಯಾಕ್ಸಿ ಸೇವೆಯಲ್ಲಿ ವ್ಯತ್ಯಯ.
  • ಬ್ಯಾಂಕ್, ಅಂಚೆ ಸೇವೆ ವ್ಯತ್ಯಯ ಸಾಧ್ಯತೆ.
  • ಅಂಗನವಾಡಿ, ಬಿಸಿಯೂಟ ಇರುವುದಿಲ್ಲ.