ಚಿಕ್ಕಮಗಳೂರಿನಲ್ಲಿ ಭಾರತ್ ಬಂದ್‌ಗೆ ಬೆಂಬಲ ನೀಡಿದ ವಿವಿಧ ಸಂಘಟನೆಗಳು …

264
firstsuddi

ಚಿಕ್ಕಮಗಳೂರು :ನಾಳೆ, ನಾಡಿದ್ದು ಕಾರ್ಮಿಕ ಸಂಘಟನೆಗಳಿಂದ ಭಾರತ್ ಬಂದ್ ಹಿನ್ನೆಲೆ ಚಿಕ್ಕಮಗಳೂರಿನಲ್ಲೂ ವಿವಿಧ ಕಾರ್ಮಿಕ ಸಂಘಟನೆಗಳು ಭಾರತ್ ಬಂದ್‌ಗೆ ಬೆಂಬಲ ನೀಡಿದ್ದು, ನಾಳೆ ಜಿಲ್ಲಾದ್ಯಂತ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಸ್ಥಗಿತಗೊಳ್ಳಲಿದ್ದು, ಆಟೋ ಹಾಗೂ ಟ್ಯಾಕ್ಸಿ ವಾಹನಗಳ ಸಂಚಾರ ಕೂಡ ಬಂದ್ ಆಗಲಿದೆ. ಜಿಲ್ಲೆಯಾದ್ಯಂತ ಖಾಸಗಿ ಬಸ್ ಸಂಚಾರ, ಅಂಗಡಿ, ಮುಂಗಟ್ಟುಗಳು, ಆಸ್ಪತ್ರೆ ಹಾಗೂ ಮೆಡಿಕಲ್ ಶಾಪ್ , ಹೋಟೆಲ್ ಗಳು, ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಚಿಕ್ಕಮಗಳೂರು ಎಐಟಿಯುಸಿ ಸಂಘಟನೆ, ಸಿಐಟಿಯು ಚಿಕ್ಕಮಗಳೂರು, ಸಾರಿಗೆ ನೌಕರರ ಸಂಘ,ಆಟೋ ಚಾಲಕರ ಸಂಘ, ಟ್ಯಾಕ್ಸಿ ಚಾಲಕರ ಸಂಘ,ಲಾರಿ ಮಾಲಿಕರ ಸಂಘ,ಕರ್ನಾಟಕ ರಾಜ್ಯ ರೈತ  ಸಂಘ, ಹಸಿರು ಸೇನೆ,ಎಲ್.ಐ.ಸಿ ಸಂಘ, ಬ್ಯಾಂಕ್ ನೌಕರರ ಸಂಘ,ಬಿಸಿಯೂಟ ಕಾರ್ಯಕರ್ತರ ಸಂಘ,ಆಶಾ ಕಾರ್ಯಕರ್ತೆಯರ ಸಂಘ,ಅಂಗನವಾಡಿ ಕಾರ್ಯಕರ್ತರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿವೆ. ಖಾಸಗಿ ಆಸ್ಪತ್ರೆಗಳು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.