ಬೆಂಗಳೂರು :ರಸ್ತೆ ಸುರಕ್ಷತಾ ತಿದ್ದುಪಡಿ ಮಸೂದೆ, ಮೋಟಾರು ವಾಹನ ಮಸೂದೆ, ಕೇಂದ್ರದ ಕಾರ್ಮಿಕ ವಿರೋಧಿ ನೀತಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾರ್ಮಿಕ ಸಂಘಟನೆಗಳು ದೇಶಾದ್ಯಂತ ಮಂಗಳವಾರ ಹಾಗೂ ಬುಧವಾರ ಎರಡು ದಿನ ಭಾರತ್ ಬಂದ್ ಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಯಾವ ಸೇವೆಗಳು ಇರುತ್ತೆ ಮತ್ತು ಯಾವ ಸೇವೆಗಳು ಇರಲ್ಲ ಎಂಬುದನ್ನು ಈ ಕೆಳಕಂಡಂತೆ ಕಾಣಬಹುದು.
ಏನಿರುತ್ತೆೆ?
- ಆಸ್ಪತ್ರೆ, ಮೆಡಿಕಲ್ ಶಾಪ್, ಸೇವೆ ಸಿಗಲಿದೆ.
- ಹಾಲು, ತರಕಾರಿ, ಪೇಪರ್, ಸೇವೆ ಸಿಗಲಿದೆ.
- ಪೆಟ್ರೋಲ್ ಬಂಕ್ಗಳು ತೆರೆದಿರಲಿವೆ.
- ಮೆಟ್ರೋ ರೈಲು ಸಂಚಾರ ಇರಲಿದೆ.
- ಆ್ಯಂಬುಲೆನ್ಸ್ ಸೇವೆ ಸಿಗಲಿದೆ.
- ಹೊಟೇಲ್ ಗಳು ಎಂದಿನಂತೆ ತೆರೆಯಲಿವೆ.
ಏನಿರಲ್ಲ?
- ಬಿಎಂಟಿಸಿ, ಕೆಎಸ್ಆರ್ ಟಿಸಿ ಬಸ್ ಸೇವೆ.
- ಬಸ್, ಆಟೋ ಟ್ಯಾಕ್ಸಿ ಸೇವೆಯಲ್ಲಿ ವ್ಯತ್ಯಯ.
- ಬ್ಯಾಂಕ್, ಅಂಚೆ ಸೇವೆ ವ್ಯತ್ಯಯ ಸಾಧ್ಯತೆ.
- ಅಂಗನವಾಡಿ, ಬಿಸಿಯೂಟ ಇರುವುದಿಲ್ಲ.










