ಮದುವೆ ಆಗ್ತಿದ್ದಾರೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ದಿವ್ಯಾಶ್ರೀ ಹಾಗೂ ಗೋವಿಂದೆ ಗೌಡ…

677
firstsuddi

ಬೆಂಗಳೂರು:  ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೊದಲ ಸೀಸನ್ ಸ್ಪರ್ಧಿಗಳಾದ ದಿವ್ಯಾಶ್ರೀ ಹಾಗೂ ಗೋವಿಂದೆ ಗೌಡ ಅವರು  ಇದೇ ತಿಂಗಳ 27 ರಂದು  ಬೆಂಗಳೂರಿನಲ್ಲಿ ನಿಶ್ವಿತಾರ್ಥ ಮಾಡಿಕೊಳ್ಳಲಿದ್ದು, ಮಾರ್ಚ್ 14 ರಂದು ದಿವ್ಯಾಶ್ರೀ ಹಾಗೂ ಗೋವಿಂದೆ ಗೌಡ  ಅವರ ವಿವಾಹ ಶೃಂಗೇರಿಯಲ್ಲಿ ನಡೆಯಲಿದೆ. ದಿವ್ಯಾಶ್ರೀ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯವರಾಗಿದ್ದು,  ದಿವ್ಯಾಶ್ರೀ ಅವರು  ಪುಣ್ಯಾತ್ ಗಿತ್ತೀಯರು  ಚಿತ್ರದಲ್ಲಿ ನಟಿಸುತ್ತಿದ್ದಾರೆ. ಗೋವಿಂದೆ ಗೌಡ ಅವರು ಕೆಜಿಎಫ್,  ಬಳಿಕ ಭರಾಟೆ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಅವಕಾಶ ಪಡೆದಿದ್ದಾರೆ.