ನಾಳೆಯಿಂದ ಪ್ರತಿ ಭಾನುವಾರ ಬೆಳಗ್ಗೆ 7 ಗಂಟೆಯಿಂದ ಮೆಟ್ರೋ ರೈಲು ಸಂಚಾರ ಆರಂಭ…

216
firstsuddi

ಬೆಂಗಳೂರು :ನಾಳೆಯಿಂದ ಪ್ರತಿ ಭಾನುವಾರ ಬೆಳಗ್ಗೆ 7 ಗಂಟೆಯಿಂದ ನಮ್ಮ ಮೆಟ್ರೋ ಸಂಚಾರ  ಆರಂಭವಾಗಲಿದೆ. ಇಷ್ಟು ದಿನ ಪ್ರತಿ ಭಾನುವಾರ ಬೆಳಗ್ಗೆ 8 ಗಂಟೆಯಿಂದ ಮೆಟ್ರೋ ಸಂಚಾರ ಆರಂಭವಾಗುತ್ತಿತ್ತು, ಆದರೆ ಇನ್ನುಮುಂದೆ ಪ್ರತಿ ಭಾನುವಾರ ಮೆಟ್ರೋ ರೈಲು ಬೆಳಗ್ಗೆ 7 ಗಂಟೆಗೆ ಸಂಚಾರ ಆರಂಭವಾಗಲಿದೆ ಎಂದು  ಬಿಎಂಆರ್​ಸಿಎಲ್​ ಟ್ವಿಟರ್​ ಖಾತೆ ಮೂಲಕ ತಿಳಿಸಿದೆ.