ನರೇಂದ್ರ ಮೋದಿ ಅವರೆ ಪ್ರಧಾನಿ ಸ್ಥಾನದ ಘನತೆಗೆ ಕುಂದು ತಂದಿದ್ದೀರಿ: ಕಾಂಗ್ರೆಸ್ ಟ್ವಿಟ್…

233
firstsuddi

ಬೆಂಗಳೂರು: ಕರ್ನಾಟಕದಲ್ಲಿ  ಮುಖ್ಯಮಂತ್ರಿಯನ್ನು ಕಾಂಗ್ರೆಸ್‌ ಕ್ಲರ್ಕ್‌ನಂತೆ ನಡೆಸಿಕೊಳ್ಳಲಾಗುತ್ತಿದೆ ಎಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೇಳಿಕೆಗೆ ಕರ್ನಾಟಕ ಕಾಂಗ್ರೆಸ್ ಟ್ವಿಟ್ಟರ್ ಮೂಲಕ ಮಾನ್ಯ ನರೇಂದ್ರ ಮೋದಿ ಅವರೆ,ಪ್ರಜಾಪ್ರಭುತ್ವದ ಆಶಯದಂತೆ ರಚನೆಯಾದ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಅವರನ್ನು ಕ್ಲರ್ಕ್ ಎಂದಿದ್ದೀರಿ. ವೈಫಲ್ಯದ ನಾಯಕ ಸುಳ್ಳುಗಳ ಸರದಾರ ನೀವು ಪ್ರಧಾನಿ ಸ್ಥಾನದ ಘನತೆಗೆ ಕುಂದು ತಂದಿದ್ದೀರಿ.ಸದನಕ್ಕೆ ಹಾಜರಾಗಿ ನಿಮ್ಮ ಮೇಲಿನ ಭ್ರಷ್ಟಾಚಾರ ಆರೋಪಕ್ಕೆ ಉತ್ತರ ನೀಡಲಾಗದ ನಿಮ್ಮ ಈ ಒಣ ಪೌರುಷ ಹಾಸ್ಯಾಸ್ಪದ ಎಂದು ಕರ್ನಾಟಕ ಕಾಂಗ್ರೆಸ್ ಟ್ವಿಟ್ಟರ್ ಮೂಲಕ ತಿರುಗೇಟು ನೀಡಿದ್ದಾರೆ.