ಬೆಂಗಳೂರು: ನಡೆದಾಡುವ ದೇವರು ಡಾ. ಶಿವಕುಮಾರ ಸ್ವಾಮೀಜಿಗಳ ದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬರದಿದ್ದಕ್ಕೆ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರು ಪ್ರಧಾನಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರಧಾನಿ ಮೋದಿ ಅವರು ಸೆಲೆಬ್ರಿಟಿ ವಿವಾಹಗಳಿಗೆ ಹೋಗುತ್ತಾರೆ. ಚಲನಚಿತ್ರ ನಟರನ್ನು ಭೇಟಿ ಮಾಡುತ್ತಾರೆ ಆದರೆ ಬಡವರಿಗೆ ಸಹಾಯ ಮಾಡಲು ತಮ್ಮ ಜೀವನವನ್ನು ಸಮರ್ಪಿಸಿದ ನಮ್ಮ ನಡೆದಾಡುವ ದೇವರ ದರ್ಶನಕ್ಕೆ ಬಂದಿಲ್ಲ. ಭಾರತ ರತ್ನವನ್ನು ನೀಡುವಂತೆ ಮಾಡಿದ ಮನವಿ ವ್ಯರ್ಥವಾಗಿದೆ ಎಂದು ಟ್ವಿಟ್ ಮೂಲಕ ತಿಳಿಸಿದ್ದಾರೆ.











