ಮೂಡಿಗೆರೆ: ಅನಾರೋಗ್ಯದಿಂದ ವಿದ್ಯಾರ್ಥಿನಿ ನಿಧನ…

1797
firstsuddi

ಮೂಡಿಗೆರೆ: ತಾಲ್ಲೂಕಿನ ಹೊರಟ್ಟಿ ನಿವಾಸಿಗಳಾದ ಶ್ರೀಮತಿ ಬಾನು ಮತ್ತು ಅಶೋಕ ದಂಪತಿಗಳ ಸುಮಾರು 9 ವರ್ಷ ಪ್ರಾಯದ ಮಗಳಾದ ಅಭೀಕ್ಷ ಹಲವು ಸಮಯಗಳಿಂದ ಜ್ವರದಿಂದ ಬಳಲುತ್ತಿದ್ದು ಮತ್ತು ಅವಳಿಗೆ ಆಗಾಗ ಬರುವ ಜ್ವರ ಆಯಸದ ಕುರಿತು ಹೆಚ್ಚಿನ ತಪಾಸಣೆಗೆ ಒಳಪಡಿಸಿದಾಗ ಕ್ಯಾನ್ಸರ್ ರೋಗವಿರುವ ಕುರಿತು ದೃಡಪಟ್ಟಿದ್ದರಿಂದ ಮಾರಕ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರಿಂದ ಇವಳನ್ನು ಇತ್ತೀಚಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ನಿನ್ನೆ ಚಿಕಿತ್ಸೆ ಪಲಕಾರಿಯಾಗದೇ ಮೃತಪಟ್ಟಿರುತ್ತಾರೆ.
ಈ ವಿದ್ಯಾರ್ಥಿನಿಯು ಮೂರನೇ ತರಗತಿಯಲ್ಲಿ ಬಣಕಲ್‍ನ ನಜರತ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು ಇವಳು ಪಾಠದ ಜೊತೆ ಜೊತೆಗೆ ಆಟದಲ್ಲಿಯೂ ಸಹ ಚುರುಕಿನ ವಿದ್ಯಾರ್ಥಿನಿಯಾಗಿದ್ದು ಶಾಲೆಯ ಗೌರವಕ್ಕೆ ಅಚ್ಚುಮೆಚ್ಚಿನ ವಿದ್ಯಾರ್ಥಿನಿ ಯೆಂಬ ಹೆಗ್ಗಳಿಕೆ ಪಾತ್ರವಾಗಿದ್ದಳು. ವಿದ್ಯಾರ್ಥಿಯ ಸಾವಿನ ಸುದ್ದಿಯನ್ನು ತಿಳಿಯುತ್ತಿದ್ದಂತೆ ಇಂದು ಶಾಲೆಗೆ ರಜೆಯನ್ನು ಘೋಷಿಸಿದ್ದು ಮತ್ತು ಇಲ್ಲಿನ ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಮೃತ ವಿದ್ಯಾರ್ಥಿಯ ಮನೆಗೆ ತೆರಳಿ ಶ್ರದ್ಧಾಂಜಲಿ ಅರ್ಪಿಸಿದರು.
ಮೃತ ವಿದ್ಯಾರ್ಥಿನಿಯ ಬಹುತೇಕ ಸಹಪಾಠಿ ವಿದ್ಯಾರ್ಥಿಗಳು ಮತ್ತು ನೆರೆಮನೆಯವರು ಗ್ರಾಮ ಪಂಚಾಯಿತಿ ಬಹುತೇಕ ಸದಸ್ಯರು ಮೃತರ ಮನೆಗೆ ತೆರಳಿ ಕಂಬನಿಯನ್ನು ಮಿಡಿದರು. ಹೊರಟಿ ಗ್ರಾಮದಲ್ಲಿ ಇಂದು  ಸ್ಮಶಾನ ಮೌನ ಆವರಿಸಿದೆ.