ತರೀಕೆರೆ :ಹೋಟೆಲ್ ಕ್ಯಾಶ್ ಕೌಂಟರ್ ನಲ್ಲಿದ್ದ ದೇವರ ಕಾಣಿಕೆ ಹಣವನ್ನು ದೋಚಿದ ಕಳ್ಳ…

250
firstsuddi

ಚಿಕ್ಕಮಗಳೂರು: ಹೋಟೆಲ್ ನ ಕ್ಯಾಶ್ ಕೌಂಟರ್ ನಲ್ಲಿದ್ದ ದೇವರ ಕಾಣಿಕೆ ಹಣವನ್ನು ಕಳ್ಳರು ಕದ್ದೊಯ್ದ ಘಟನೆ ಜಿಲ್ಲೆಯ ತರೀಕೆರೆ ಪಟ್ಟಣದ ಕೋಡಿಕ್ಯಾಂಪ್ ನಲ್ಲಿ ನಡೆದಿದೆ. ಕಳೆದ ಎರಡು ತಿಂಗಳಿನಿಂದ ತರೀಕೆರೆ ಪಟ್ಟಣದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಹೋಟೆಲ್, ಅಂಗಡಿ, ದೇವಸ್ಥಾನಗಳೇ ಕಳ್ಳರ ಮೈನ್ ಟಾರ್ಗೆಟ್ ಆಗಿದೆ. ತಡರಾತ್ರಿ ಅನ್ಸರ್ ಎಂಬುವರಿಗೆ ಸೇರಿದ ಆರ್ಫ ಹೋಟೆಲ್ ನಲ್ಲಿ ಕ್ಯಾಶ್ ಕೌಂಟರ್ ನಲ್ಲಿದ್ದ ದೇವರ ಕಾಣಿಕೆ ಹಣವನ್ನು ಕಳ್ಳ ದೋಚುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.