ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರಾದ ಹಿರಿಯ ಸಹಕಾರಿ ಕೊಪ್ಪದ ಶ್ರೀ ಎ.ಆರ್.ಜಯಪ್ರಕಾಶ್ ಅಸಗೋಡು ರವರು ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಶಿವಮೊಗ್ಗ ಆಸ್ಪತ್ರೆ ಯಲ್ಲಿ ಚಿಕಿತ್ಸೆಯಲ್ಲಿದ್ದ ಅವರು ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು.
ದಿವಂಗತರು ಪತ್ನಿ,ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಎ.ಆರ್.ಜಯಪ್ರಕಾಶ್ ರವರ ಅಂತ್ಯಕ್ರಿಯೆ ಜ.24ರ ಗುರುವಾರ ನಡೆಯಲಿದೆ.
ಎ.ಆರ್.ಜಯಪ್ರಕಾಶ್ ರವರ ನಿಧನಕ್ಕೆ ವಿಧಾನ ಪರಿಷತ್ ಉಪ ಸಭಾಪತಿ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಎಸ್.ಎಲ್. ಧರ್ಮೇಗೌಡ ರವರು ಅತೀವ ನೋವು ವ್ಯಕ್ತಪಡಿಸಿದ್ದಾರೆ.
ದಿವಂಗತರು ಸಹಕಾರಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ನೆನಪು ಮಾಡಿಕೊಳ್ಳುವಂತಹ ದ್ದಾಗಿದ್ದು, ಜನಾನುರಾಗಿ ಮತ್ತು ಸ್ನೇಹ ಜೀವಿಯಾಗಿದ್ದರು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅವರ ಅಗಲಿಕೆಯ ದುಖಃವನ್ನು ಸಹಿಸಿಸುವ ಶಕ್ತಿ ಅವರ ಕುಟುಂಬಕ್ಕೆ ದೇವರು ಕರುಣಿಸಿ ದಿವಂಗತರ ಆತ್ಮಕ್ಕೆ ಶಾಂತಿ ದೊರಕಲಿ ಎಂದವರು ತಿಳಿಸಿದ್ದಾರೆ.
ಎ.ಆರ್.ಜಯಪ್ರಕಾಶ್ ರವರ ನಿಧನಕ್ಕೆ ಡಿ.ಸಿ.ಸಿ ಬ್ಯಾಂಕ್‍ಗೆ ಸಿಬ್ಬಂದಿಗಳು, ನಿರ್ದೇಶಕ ಮಂಡಳಿ ಸದಸ್ಯರುಗಳು ಅತೀವ ದುಖಃ ವ್ಯಕ್ತಪಡಿಸಿದೆ.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರಾದ ಶ್ರೀ ಎ.ಆರ್.ಜಯಪ್ರಕಾಶ್ ಅಸಗೋಡು ನಿಧನ…










