ಕೇಂದ್ರ ಮಧ್ಯಂತರ ಬಜೆಟ್ 2019: ಪ್ರಧಾನ್​ಮಂತ್ರಿ ಕಿಸಾನ್ ಸಮ್ಮಾನ್​ ಯೋಜನೆ ಘೋಷಣೆ…

285
firstsuddi

ನವದೆಹಲಿ: ಪ್ರಧಾನಿ ಮೋದಿ ಸರ್ಕಾರ ಮಧ್ಯಂತರ ಬಜೆಟ್​ನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಸಣ್ಣ ಮತ್ತು ಮಧ್ಯಮ ರೈತರ ಖಾತೆಗಳಿಗೆ ವಾರ್ಷಿಕ 6 ಸಾವಿರ ರೂಪಾಯಿ ಜಮಾ ಮಾಡಲಾಗುವುದು. 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರ ಅಕೌಂಟ್ ಗೆ ಮೂರು ಕಂತುಗಳಲ್ಲಿ 2 ಸಾವಿರ ಹಾಕಲಾಗುವುದು ಎಂದು ಬಜೆಟ್​ನಲ್ಲಿ ಕೇಂದ್ರ ಹಣಕಾಸು ಸಚಿವ ಪಿಯೂಷ್​ ಗೊಯಲ್ ಘೋಷಿಸಿದ್ದಾರೆ. ಪ್ರಕೃತಿ ವಿಪತ್ತಿಗೆ ನಷ್ಟಕ್ಕೊಳಗಾದ  ಎಲ್ಲ ರೈತರಿಗೂ ಹೊಸ ಯೋಜನೆ ಮೂಲಕ ನೆರವು ನೀಡುವ ಯೋಜನೆಯನ್ನು ಘೋಷಿಸಲಾಗಿದೆ.