ಮಧ್ಯಂತರ ಬಜೆಟ್ 2019ರ ಹೈಲೈಟ್ಸ್… 

441
firstsuddi
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಕೊನೆಯ ಮತ್ತು ಮಧ್ಯಂತರ ಬಜೆಟ್ ಅನ್ನು ವಿತ್ತ ಸಚಿವ ಪಿಯೂಷ್ ಗೋಯಲ್ ಇಂದು ಮಂಡಿಸಿದ್ದಾರೆ.

ಮಧ್ಯಂತರ ಬಜೆಟ್ 2019ರ ಹೈಲೈಟ್ಸ್ 

*ಐದು ವರ್ಷಗಳಲ್ಲಿ ಭಾರತ ಜಾಗತಿಕವಾಗಿ ಪ್ರಕಾಶಿಸುತ್ತಿದೆ. 2022ರ ಹೊತ್ತಿಗೆ ನವ ಭಾರತ ನಿರ್ಮಾಣ.

* ಭಯೋತ್ಪಾದನೆ , ಜಾತಿವಾದವನ್ನು ನಿಯಂತ್ರಿಸಿದ್ದೇವೆ.

* ಜಿಡಿಪಿ ಯಲ್ಲಿ ಜಗತ್ತಿನ ಗಮನ ಸೆಳೆದಿದ್ದೇವೆ.

*ಹಣದುಬ್ಬರ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದೇವೆ.ಕಳೆದ ಸರ್ಕಾರಗಳಿಗೆ ಹೋಲಿಸಿದರೆ ನಾವು ಹಣದುಬ್ಬರವನ್ನು ಯಶಸ್ವಿಯಾಗಿ ನಿಯಂತ್ರಿಸಿದ್ದೇವೆ. 

* ಆರ್ಥಿಕ ವಲಯದಲ್ಲಿ ಭಾರತ 6ನೇ ಸ್ಥಾನದಲ್ಲಿದೆ.

* ಕಳೆದ 5 ವಷಗಳಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಿದ್ದೇವೆ.

 * ಭ್ರಷ್ಟಾಚಾರ ಮುಕ್ತ ಆಡಳಿತ 

*ದಿವಾಳಿ ಹಂತದಲ್ಲಿದ್ದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಪುನಶ್ಚೇತನ.

*ಪಶುಪಾಲನೆ ಮೀನುಗಾರಿಕೆ ಯೋಜನೆಗೆ 750 ಕೋಟಿ ರಾಷ್ಟ್ರೀಯ ಕಮಾಧೇನು ಯೋಜನೆ ಘೋಷಣೆ.

*ಕಲ್ಲಿದ್ದಲು, ತರಂಗಾಂತರ ಮಾರಾಟದಲ್ಲಿ ಪಾರ್ದರ್ಶಕತೆ ಕಾಯ್ದುಕೊಂಡಿದ್ದೆವೆ.

*ಸ್ವಚ್ಛ ಭಾರತ ಮಿಷನ್​ ಮೂಲಕ ಭಾರತದ ಗ್ರಾಮಾಂತರ ಭಾಗದ ಸ್ವರೂಪವನ್ನೇ ಬದಲಿಸಿದ್ದೇವೆ.

*ಬಡವರು ಹಿಂದುಳಿದ ವರ್ಗಗಳ ಏಳಿಗೆಗೆ ಯೋಜನೆ.

*ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ.

*ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ.

* ಎಲ್ಲಾ ವರ್ಗಗಳಿಗೂ ಮೀಸಲಾತಿ ಮೂಲಕ ಸಮಾನತೆ.

*ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆಗಳ ನಿರ್ಮಾಣ.

*ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನೆಯಡಿ ರಸ್ತೆಗಳ ನಿರ್ಮಾಣ.

* ಆಯುಷ್ಮಾನ್ ಭಾರತ್ 50 ಕೋಟಿ ಜನರಿಗೆ ಉಪಯೋಗ, ಈ ವರೆಗೂ 10ಲಕ್ಷದ ವರೆಗೆ ಔಷಧೀಯ ವೆಚ್ಚ.

*ರೈತರ ನೆರವಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಘೋಷಣೆ. ರೈತರ ಬ್ಯಾಂಕ್ ಖಾತೆಗೆ ನೇರವಾಗಿ 6,000 ರೂ. ವರ್ಗಾವಣೆ.

*ನೈಸರ್ಗಿಕ ವಿಕೋಪಕ್ಕೆ ಒಳಗಾದ ರೈತರಿಗೆ ಶೇ.2ರಷ್ಟು ಬಡ್ಡಿ ರಿಯಾಯಿತಿ.

*ಪ್ರಕೃತಿ ವಿಪತ್ತಿಗೆ ನಷ್ಟಕ್ಕೊಳಗಾದ ರೈತರ ನೆರವಿಗೆ ಯೋಜನೆ.

*ಮಹಿಳಾ ಸಬಲೀಕರಣಕ್ಕೆ ನಮ್ಮ ಸರ್ಕಾರ ಬದ್ದ.

*ಸಾಲ ಮರುಪಾವತಿ ಮಾಡಿದ ರೈತರಿಗೆ ಶೇ.3ರಷ್ಟು ಬಡ್ಡಿ ವಿನಾಯಿತಿ.

*ಇಎಸ್ ಐ ಅರ್ಹತಾ ಮಿತಿ 15 ದಿಂದ 25 ಸಾವಿರಕ್ಕೆ ಏರಿಕೆ ಗ್ರಾಚ್ಯುಟಿ ಮೊತ್ತ 10 ಲಕ್ಷದಿಂದ 20 ಲಕ್ಷಕ್ಕೆ ಏರಿಕೆ.

*ರಿಸ್ಕ್ ಏರಿಯಾದಲ್ಲಿ ಕೆಲಸ ಮಾಡುವವರಿಗೆ ವೇತನ ಹೆಚ್ಚಳ.

*ರಕ್ಷಣಾ ವಲಯಕ್ಕೆ ಬಜೆಟ್​​ನಲ್ಲಿ​ 3 ಲಕ್ಷ ಕೋಟಿ ರೂಪಾಯಿ ಅನುದಾನ. ಅಗತ್ಯ ಬಿದ್ದರೆ ಮತ್ತಷ್ಟು ಅನುದಾನ.

*ಸಾಗರ  ಮಾಲ  ಯೋಜನೆ ಮೂಲಕ ಜಲಸಾರಿಗೆಗೆ ಆದ್ಯತೆ.

*ಕೆಲಸದ ಅವಧಿಯಲ್ಲಿ ಕಾರ್ಮಿಕ ಮೃತಪಟ್ಟರೆ 6ಲಕ್ಷದವರೆಗೂ ಪರಿಹಾರ

*ಉಡಾನ್ ಯೋಜನೆ ಮೂಲಕ ಸಾಮಾನ್ಯ ಜನರಿಗೆ ವಿಮಾನಯಾನ.

*ಪ್ರಧಾನಮಂತ್ರಿ ಶ್ರಮ್ ಯೋಗಿ ಮಾನ್ ಧನ್ ಯೋಜನೆ ಘೋಷಣೆ.

*ಉರಿ ಚಿತ್ರ ನೋಡುವ ಸೌಭಾಗ್ಯ ಸಿಕ್ಕಿತು. ಭಾರತೀಯ ಚಿತ್ರೋದ್ಯಮಕ್ಕೆ ಏಕಗವಾಕ್ಷಿ ಪದ್ಧತಿ ನೇರ ತೆರಿಗೆಯಲ್ಲಿ ಮಹತ್ವದ ಬದಲಾವಣೆ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ

*ಅಲೆಮಾರಿ ಜನಾಂಗವನ್ನು ಗುರುತಿಸಿ ಅವರಿಗೆ ಅನುದಾನ ನೀಡಲು ನಿರ್ಧಾರ.

*ಬೀದಿ ಬದಿ ವ್ಯಾಪಾರಿ ರಿಕ್ಷಾವಾಲಗಳ ಭದ್ರತೆಗೆ ಕ್ರಮ,

*ಒಳನಾಡು ಸಾರಿಗೆ ಮೂಲಕ ಕೊಲ್ಕತ್ತಾದಿಂದ ವಾರಣಾಸಿಗೆ ಕಂಟೇನರ್.

*ಮೊಬೈಲ್ ಡೇಟಾ ಬಳಕೆಯಲ್ಲಿ 50 ಪಟ್ಟು ಹೆಚ್ಚಳ.

*ಮುಂದಿನ 5 ವರ್ಷಗಳಲ್ಲಿ 1ಲಕ್ಷ ಗ್ರಾಮಗಳಲ್ಲಿ ಡಿಜಿಟಲ್ ಕ್ರಾಂತಿಗೆ ನಿರ್ಧಾರ.

* ಮೇಕ್ ಇನ್ ಇಂಡಿಯಾ  ಅಡಿ 12 ಲಕ್ಷ ಯುವಕರಿಗೆ ಉದ್ಯೋಗ.

*ಆಧುನಿಕ ಕೃಷಿ ತಂತ್ರಜ್ಞಾನ ಅಳವಡಿಕೆ ಮೂಲಕ ಉತ್ಪಾದನೆಯಲ್ಲಿ ಹೆಚ್ಚಳ

*ಗ್ರಾಮಗಳು ಡಿಜಿಟಲ್ ಗ್ರಾಮಗಳಾಗಿ ಬದಲಾಗಿವೆ.

*ಉಜ್ವಲ ಯೋಜನೆಯಡಿಯಲ್ಲಿ 8 ಕೋಟಿ LPG ಸಂಪರ್ಕ.

* ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ. ಅಸಂಘಟಿತ ವಲಯದಲ್ಲಿ 60 ವರ್ಷ ದಾಟಿದ ಕಾರ್ಮಿಕರಿಗೆ ಪ್ರತಿ ತಿಂಗಳು 3 ಸಾವಿರ ರೂಪಾಯಿ ಪಿಂಚಣೆ.

*ಐಟಿ ಇಲಾಖೆ ಆನ್​ಲೈನ್​ ಮೂಲಕ ಕೆಲಸ ಮಾಡುತ್ತಿದೆ. ದಿನದ 24 ಗಂಟೆಗಳಲ್ಲೂ ಆನ್​ಲೈನ್​ ಮೂಲಕ ತೆರಿಗೆ ಪಾವತಿ.

*ರಾಷ್ಟ್ರೀಯ ಶಿಕ್ಷಣ ಮಿಷನ್​ಗೆ 38,578 ಕೋಟಿ ಅನುದಾನ. 

*ಸ್ವಚ್ಛ ನದಿ ಯೋಜನೆಗಳ ಮೂಲಕ ನದಿಗಳ ಶುದ್ಧೀಕರಣ.

*OROP ಯೋಜನೆಗೆ 35 ಸಾವಿರ ಕೋಟಿ ರೂಪಾಯಿ ಮೀಸಲು.

*ಪುನರ್ ನವೀಕರಣ ಮಾಡಬಹುದಾದ ಇಂಧನ ಬಳಕೆಗೆ ಉತ್ತೇಜನ ನೀಡಲು ಅಂತಾರಾಷ್ಟ್ರೀಯ ಸೋಲಾರ್ ಅಲಯೆನ್ಸ್‌ ರೂಪಿಸಿದೆ. ಕಳೆದ 5 ವರ್ಷಗಳಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ 10 ಪಟ್ಟು ಹೆಚ್ಚಳವಾಗಿದೆ

*ರಾಷ್ಟ್ರೀಯ ಶಿಕ್ಷಣ ಮಿಷನ್​ಗೆ 38,578 ಕೋಟಿ ಅನುದಾನ.

*ಪರಿಶಿಷ್ಟ ಜಾತಿ ಅಭಿವೃದ್ಧಿಗೆ 76 ಸಾವಿರ ಕೋಟಿ ರೂ. ಅನುದಾನ.  

*ಕಪ್ಪು ಹಣ ಮುಕ್ತ ದೇಶವನ್ನಾಗಿ ಮಾಡಲು ಸರ್ಕಾರ ಕ್ರಮ.

*ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ 40 ಸಾವಿರದಿಂದ 50 ಸಾವಿರಕ್ಕೆ ಏರಿಕೆ

* 5 ಲಕ್ಷದವರೆಗೂ ವಿನಾಯಿತಿ. ಆದಾಯ ತೆರಿಗೆ ಮಿತಿ 2.5 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ. 6.5 ಲಕ್ಷದವರೆಗೆ ಆದಾಯ ತೆರಿಗೆ ಪಾವತಿಸುವಂತಿಲ್ಲ. ಉಳಿತಾಯ ಯೋಜನೆಗಳ ಮೇಲೆ ಒಂದೂವರೆ ಲಕ್ಷದವರೆಗೆ ಹೂಡಿಕೆಗೆ ಅವಕಾಶ.

*ಗೃಹ ಸಾಲ 2 ಲಕ್ಷದವರೆಗೆ ತೆರಿಗೆ ವಿನಾಯಿತಿ. 

ಬಜೆಟ್ ಭಾಷಣ ಮುಕ್ತಾಯಗೊಳಿಸಿದ ಪಿಯೂಷ್ ಗೋಯಲ್. ಲೋಕಸಭೆ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದ ಸ್ಪೀಕರ್ ಸುಮಿತ್ರಾ ಮಹಾಜನ್.