ಮೂಡಿಗೆರೆ: ಶಿಕಾರಿಗೆ ತೆರಳಿದ್ದ ವ್ಯಕ್ತಿಗೆ ಗುಂಡು ತಗುಲಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಭಾರತಿ ಬೈಲ್ ನಲ್ಲಿ ನಡೆದಿದೆ. ಭಾರತಿ ಬೈಲ್ ಗೋಪಾಲ್ (30) ಮೃತಪಟ್ಟ ವ್ಯಕ್ತಿ. ಅರಣ್ಯ ಅಧಿಕಾರಿಗಳ ಖಡಕ್ ಸೂಚನೆ ನಡುವೆಯೂ ಗೋಪಾಲ್ ರಾತ್ರಿ ತೋಟಕ್ಕೆ ಶಿಕಾರಿಗೆ ತೆರಳಿದ್ದ ಸಂದರ್ಭದಲ್ಲಿ ಗುಂಡು ತಗುಲಿ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಶೂಟೌಟ್ ಅನುಮಾನಗಳಿಗೆ ಕಾರಣವಾಗಿದೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.










