ಎರಡು ಬಸ್​ಗಳ ಮುಖಾಮುಖಿ  ನಡುವೆ ಡಿಕ್ಕಿ, ಓರ್ವ ಚಾಲಕನ ದುರ್ಮರಣ…

250
firstsuddi

ಬಳ್ಳಾರಿ: ಎರಡು ಬಸ್​ಗಳ ನಡುವೆ ಡಿಕ್ಕಿಯಾಗಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, 18 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಕೂಡ್ಲಗಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ. ಕೂಡ್ಲಿಗಿ ರಾಷ್ಟ್ರೀಯ ಹೆದ್ದಾರಿಯ ಮೊರಬ ಕ್ರಾಸ್ ಬಳಿ ಎಸ್ಆರ್​ಎಸ್ ಸ್ಲೀಪರ್ ಕೋಚ್​ ಬಸ್​ ಮತ್ತು ಎನ್ಇಕೆಎಸ್ಆರ್​​​ಟಿಸಿಯ ಕರೋನ ಸ್ಲೀಪರ್ ಬಸ್​​ ನಡುವೆ ಮುಖಾಮುಖಿ  ಡಿಕ್ಕಿಯಾಗಿದ್ದು,  ಕರೋನ ಸ್ಲೀಪರ್ ಬಸ್​​​ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡಿರುವರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೂಡ್ಲಿಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.