7 ಇಂಚು ಶೂ ಒಳಗೆ ಸೇರಿಕೊಂಡಿತ್ತು 5 ಅಡಿ ಉದ್ದದ ನಾಗರ ಹಾವು…

814
firstsuddi

ಬೆಂಗಳೂರು: 7 ಇಂಚು ಶೂ ಒಳಗೆ ಸುಮಾರು 5 ಅಡಿ ಉದ್ದದ ನಾಗರಹಾವು ಪತ್ತೆಯಾಗಿರುವ ಘಟನೆ ನೆಲಮಂಗಲ ಸಮೀಪದ ನಾರಾಯಣಪ್ಪನ ಪಾಳ್ಯದಲ್ಲಿ ನಡೆದಿದೆ. ಮೂರ್ತಿ ಎಂಬುವರ  ಮನೆಯಲ್ಲಿ ನಾಗರ ಹಾವು ಪತ್ತೆಯಾಗಿದ್ದು,  ಮನೆಯ ಹೊರಗೆ ಬಿಚ್ಚಿಟ್ಟಿದ್ದ ಶೂ ಒಳಗೆ ನಾಗರ ಹಾವು ಸೇರಿಕೊಂಡಿದ್ದು, ಶೂ ಒಳಗೆ ಹಾವನ್ನು ಕಂಡು ಮನೆಯವರು ಗಾಬರಿಯಾಗಿದ್ದು, ತಕ್ಷಣ  ಸ್ನೇಕ್ ಲೋಕೇಶ್‍ ಎಂಬುವರಿಗೆ  ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮಾಹಿತಿ ತಿಳಿದ ಲೋಕೇಶ್  ಹಾವನ್ನು ರಕ್ಷಣೆ ಮಾಡಿದ್ದಾರೆ.