ಚಿಕ್ಕಮಗಳೂರು : ಹಾಸ್ಟೆಲ್ ಊಟ ಸೇವಿಸಿ ಮಕ್ಕಳು ಅಸ್ವಸ್ಥ ಗೊಂಡಿರುವ ಘಟನೆ ಶಿರವಾಸೆಯ ವಿವೇಕಾನಂದ ಶಾಲೆಯಲ್ಲಿ ನಡೆದಿದೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳು ಬಿಸಿಎಂ ಹಾಸ್ಟೆಲ್ ಮಕ್ಕಳು ಎನ್ನಲಾಗಿದ್ದು, ಮಕ್ಕಳು ಮಧ್ಯಾಹ್ನ ಪುಳಿಯೊಗರೆ ತಿಂದು, ಹಾಲನ್ನು ಕುಡಿದಿದ್ದರು ಎಂದು ತಿಳಿದು ಬಂದಿದ್ದು, 17 ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಗೆ ತಹಶೀಲ್ದಾರ್ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಪುಳಿಯೊಗರೆ ಹಾಗೂ ಹಾಲನ್ನು ಅಧಿಕಾರಿಗಳು ಲ್ಯಾಬ್‍ಗೆ ಕಳುಹಿಸಿದ್ದಾರೆ.









