ಮೂಡಿಗೆರೆ: ಪಟ್ಟಣದ ಹೃದಯ ಭಾಗದಲ್ಲಿರುವ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸುರ್ಪದಿಗೆ ಬರುವಂತಹ ಪ್ರವಾಸಿಮಂದಿರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಕ್ರಮ ಚಟುವಟಿಕೆಗಳು ತಂಡವವಾಡುತ್ತಿದ್ದರು ಸಂಬಂಧಪಟ್ಟ ಅಧಿಕಾರಿಗಳ ಸುರ್ಪರ್ಧಿಯಲ್ಲೇ ಅನಧಿಕೃತ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಇಲ್ಲಿನ ಅಧಿಕಾರಿಗಳು ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲವೆಂಬತೆ ವರ್ತಿಸುತ್ತಿರುವುದು ತೀವ್ರ ಅನುಮಾನಕ್ಕೆ ಎಡೆಮಾಡಿಕೊಡುವಂತಿದೆ.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕೆಲವು ನಿರ್ಬಂಧನೆಗಳಾದ ‘ಖಾಸಾಗಿ ವಾಹನಗಳಿಗೆ ಪ್ರವೇಶವಿಲ್ಲ, ‘ಅನಧಿಕೃತ ವ್ಯಕ್ತಿಗಳಿಗೆ ಪ್ರವೇಶವಿಲ್ಲ, ಎಂಬ ನಿಯಮಗಳು ನಿರ್ಬಂದಿತವಾಗಿದ್ದರೂ ಇಲ್ಲಿ ಈಗ ಪ್ರಸ್ತುತ ಒಂದು ಸಿನಿಮಾ ಚಿತ್ರೀಕರಣವು ನಡೆಯುತ್ತಿದ್ದು ಇದರ ಚಿತ್ರೀಕರಣಕ್ಕಾಗಿ ಪೂರ್ವತಯಾರಿಯಂತೆ ಕಸವನ್ನು ಅಲ್ಲಲ್ಲಿ ಎಸೆದು ಇಲ್ಲಿರುವಂತಹ ಸೂಚನಾ ನಾಮಫಲಕವನ್ನು ತೆರವುಗೊಳಿಸಿ ಚಿತ್ರೀಕರಣಕ್ಕೆ ಎಲ್ಲಾ ಸಕಲ ಸಿದ್ದತೆಗಳು ಅಧಿಕಾರಿಗಳ ಕಣ್ಣೆದುರಲ್ಲೇ ನಡೆದರೂ ಇಂತಹ ಕಾರ್ಯಕ್ರಮವನ್ನು ಮಾಡಲು ಇವರಿಗೆ ಒಪ್ಪಿಗೆ ಕೊಟ್ಟವರು ಯಾರು? ಜನಸಾಮಾನ್ಯರಿಗೊಂದು ನ್ಯಾಯ ಪ್ರಭಾವಿಗಳಿಗೊಂದು ನ್ಯಾಯವೇ ಎಂಬಂತಹ ಚರ್ಚೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೇವಲ ನಿಯಮಗಳು ನಾಮಫಲಕಕ್ಕೆ ಸೀಮೀತವಾಗಿರುವುದು ಎಂಬಂತಹ ಅಡಕ ಎಲ್ಲೆಲ್ಲಿಯೂ ಸಾಮಾನ್ಯವಾಗಿದ್ದರೂ ಇಲ್ಲಿ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಎಂಬಂತೆ ಇಲ್ಲಿರುವ ನಾಮಫಲಕವನ್ನು ತೆರವುಗೊಳಿಸಿ ಗೋಡೆಗಳಲ್ಲಿರುವಂತಹ ಸೂಚನಾ ಫಲಕಕ್ಕೆ ಕೆಸರು ಬಳಿದು ಚಿತ್ರೀಕರಣಕ್ಕೆ ಬೇಕಾದಂತೆ ಏರ್ಪಾಡು ಮಾಡಿ ಚಿತ್ರೀಕರಣ ಮಾಡುತ್ತಿದ್ದರೂ ಇದೇ ದಾರಿಯಲ್ಲಿ ಪ್ರತಿದಿನ ಮುಂಜಾನೆ ವಾಯುವಿಹಾರಕ್ಕೆಂದೇ ಇಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಿರುಗಾಡುತ್ತಿದ್ದರೂ ಇಂತಹ ವಿಷಯದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಅದಲ್ಲದೇ ಇಲ್ಲಿ ಪ್ರತಿದಿನ ಸಂಜೆಯಾಗುತಿದ್ದಂತಯೆ ಬಾಟಲಿ ಶಬ್ದಗಳು ಕೇಳಿಬರುತ್ತಿರುವ ಅಪಾದನೆಗಳಿದ್ದು ಈ ಪ್ರವಾಸಿ ಮಂದಿರ ಪ್ರಭಾವಿ ವ್ಯಕ್ತಿಗಳ ಬಾರ್ ಅಂಡ್ ರೆಸ್ಟೋರೆಂಟ್ ಆಗಿ ಮಾರ್ಪಟ್ಟಿದೆಯೇ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ಜಿಲ್ಲೆಯಲ್ಲಿ ಈ ಮುಂಚೆ ದಕ್ಷ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಜಿ,ಸತ್ಯವತಿ ಯವರು ಇಂತಹ ಸೂಕ್ಷ್ಮ ವಿಷಯಕ್ಕೆ ಕಡಿವಾಣವನ್ನು ಹಾಕಿ ಇಲ್ಲಿನ ಪ್ರವಾಸಿ ಮಂದಿರದ ನವೀಕರಣಕ್ಕಾಗಿ ಸುಮಾರು 50 ಲಕ್ಷ ರೂ ಅನುದಾನ ಬಿಡುಗಡೆ ಮಾಡಿ ಕೆಲವು ನಿರ್ಬಂಧನೆಗಳನ್ನು ಹಾಕಿ ಸ್ವಚ್ಚತೆ, ನಾಮಫಲಕ , ಹಾಗೂ ಇತರೆ ಮೂಲಭೂತ ಸೌಲಭ್ಯಕ್ಕೆ ಒತ್ತುಕೊಟ್ಟು ಒಂದು ಅರ್ಥ ತಂದಿದ್ದರು. ಈಗ ಅವರ ವರ್ಗಾವಣೆ ನಂತರ ಇಲ್ಲಿರುವ ಪ್ರವಾಸಿ ಮಂದಿರ ಮತ್ತೆ ಅಕ್ರಮ ಚಟುವಟಿಕೆಗಳ ಗೂಡಾಗಿ ಮಾರ್ಪಟ್ಟಿರುವುದಕ್ಕೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ ಮತ್ತು ಇಂತಹ ಘಟನೆಗಳು ಎಗ್ಗಿಲ್ಲದಂತೆ ಮರುಕಳಿಸುತ್ತಿರುವುದನ್ನು ನೋಡಿ ಈ ಹಿಂದೆ ಒಂದು ಕನ್ನಡ ವಾರಪತ್ರಿಕೆ ಇದರ ಸುದ್ದಿಯನ್ನು ವಿಸ್ತ್ರತವಾಗಿ ಸುದ್ದಿ ಪ್ರಸಾರ ಮಾಡಿದ್ದಾದರೂ ಏನು ಕ್ರಮಕೈಗೊಳ್ಳದೆ ಕಣ್ಣುಮುಚ್ಚಿ ಕುಳಿತಿರುವ ಅಧಿಕಾರಿಗಳಿಗೆ ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಾರ್ವಜನಿಕರ ಒತ್ತಾಯವಾಗಿದೆ.










