ಪ್ರೇಮಿಗಳ ದಿನದಂದೇ ಸಪ್ತಪದಿ ತುಳಿದ ವಿಜಯ್ ಸೂರ್ಯ…

389
firstsuddi

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಅಗ್ನಿಸಾಕ್ಷಿ” ಧಾರಾವಾಹಿ  ಸಿದ್ದಾರ್ಥ್ ಖ್ಯಾತಿಯ ನಟ ವಿಜಯ್ ಸೂರ್ಯ ಅವರು ಪ್ರೇಮಿಗಳ ದಿನದಂದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿಜಯ್ ಸೂರ್ಯ ಅವರು ತಮ್ಮ ದೂರದ ಸಂಬಂಧಿ ಚೈತ್ರಾ ಅವರನ್ನು ವರಿಸಿದ್ದು, ಚೈತ್ರಾ ಅವರು ಸಾಫ್ಟ್ ವೇರ್ ಉದ್ಯೋಗಿಯಾಗಿದ್ದು, ಗುರು ಹಿರಿಯರು, ಕುಟುಂಬದವರ ಸಮ್ಮುಖದಲ್ಲಿ ವಿಜಯ್
ಸೂರ್ಯ ಹಾಗೂ ಚೈತ್ರಾ ಅವರ ವಿವಾಹ ನೆರವೇರಿದೆ. ವಿಜಯ್ ಸೂರ್ಯ ಅವರು ಇಷ್ಟಕಾಮ್ಯ,ಕದ್ದು ಮುಚ್ಚಿ,ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.