ಬೆಂಗಳೂರು: ಯಲಹಂಕ ಬಳಿ ಸೂರ್ಯಕಿರಣ್ ಹೆಸರಿನ ಎರಡು ಲಘು ವಿಮಾನಗಳು ಡಿಕ್ಕಿ ಹೊಡೆದಿದ್ದು, ಏರ ಶೋ ತಾಲೀಮಿನ ವೇಳೆ ಘಟನೆ ನಡೆದಿದೆ. ಯಲಹಂಕ ವಾಯುನೆಲೆಯಲ್ಲಿ ನಾಳೆಯಿಂದ ಏರ್ ಶೋ ಆರಂಭವಾಗಲಿದ್ದು, ಅದಕ್ಕಾಗಿ ತರಬೇತಿ ನಡೆಸುವಾಗ ಆಕಸ್ಮಿಕವಾಗಿ ವಿಮಾನಗಳು ಡಿಕ್ಕಿಯಾಗಿವೆ. ಡಿಕ್ಕಿ ಹೊಡೆದು ಬಳಿಕ ನೆಲಕ್ಕೆ ವಿಮಾನಗಳು ಬಿದ್ದಿದ್ದು, ಅದೃಷ್ಟವಶಾತ್ ಎರಡೂ ಯುದ್ಧವಿಮಾನಗಳ ಪೈಲಟ್ ಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.










