ಮಂಡ್ಯ: ನಿನ್ನೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದರು ಮತ್ತು ಮಂಡ್ಯ ಜಿಲ್ಲೆಯಲ್ಲಿ ರೈತರ ಸಾಲಮನ್ನಾ- ಋಣಮುಕ್ತ ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಿದರು. ಈ ಸಂದರ್ಭದಲ್ಲಿ ವಿಶೇಷ ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು. ಮಂಡ್ಯಕ್ಕೆ ಬಂದು ಅನೇಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು ಈ ಸಾಲಿನಲ್ಲಿ ರೈತರಿಗೆ ಸಾಲಮನ್ನಾ- ಋಣಮುಕ್ತ ಪಾತ್ರ ವಿತರಿಣೆ ಕಾರ್ಯಕ್ರಮವೂ ಇತ್ತು. ಆಗ ಕಂಡದ್ದು ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧ ಹೆಚ್ ಗುರು ಅವರ ಪತ್ನಿ.ತಕ್ಷಣವೇ ಅವರನ್ನು ವೇದಿಕೆಗೆ ಬರಮಾಡಿಕೊಂಡ ಮುಖ್ಯಮಂತ್ರಿಗಳು ಯೋಧ ಗುರು ಪತ್ನಿಗೆ ಸರ್ಕಾರಿ ನೌಕರಿ ನೀಡುವ ಭರವಸೆಯನ್ನು ಕೊಟ್ಟರು. ಇದನ್ನು ಕೇಳಿ ಗುರು ಅವರ ಪತ್ನಿ ಸಂತೋಷದಿಂದ ಕಣ್ಣೀರಿಟ್ಟರು. ಇಡೀ ಸಭೆ ಅವರ ಜೊತೆ ಮೂಕವಾಗಿತ್ತು.










