ಪತ್ನಿಯನ್ನು ಕೊಂದು ಆಕೆ ಮನೆಗೆ ವೀಡಿಯೋ ಕಾಲ್ ಮಾಡಿ ಶವ ತೋರಿಸಿದ ಪತಿ…

132
firstsuddi

ವಿಜಯಪುರ: ಪತಿಯೊಬ್ಬ ಪತ್ನಿಯನ್ನು  ಬರ್ಬರವಾಗಿ ಕೊಂದು ಬಳಿಕ ಆಕೆಯ ಮನೆಯವರಿಗೆ ವಿಡಿಯೋ ಕಾಲ್ ಮಾಡಿ ಶವ ತೋರಿಸಿರುವ ಘಟನೆ ನಗರದ ಕಾಸಗೇರಿ ಗಲ್ಲಿಯಲ್ಲಿ  ನಡೆದಿದೆ. ಸೋನಾಬಾಯಿ (28) ಪತಿಯಿಂದ ಹತ್ಯೆಯಾದ ಪತ್ನಿ.ಈಕೆಯ ಪತಿ ಮಲ್ಲಿಕಾರ್ಜುನ ಪವಾರ  ತನ್ನ ಪತ್ನಿಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ ಬಳಿಕ ಆಕೆಯ ಮನೆಯವರಿಗೆ  ಸೋನಾಬಾಯಿಯ ಮೃತದೇಹವನ್ನು ತೋರಿಸಿಸಿದ್ದು,ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆರೊಪಿಯನ್ನು  ಪೊಲೀಸರು ಬಂಧಿಸಿದ್ದು, ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.