ಬೆಂಗಳೂರು: ಟ್ವಿಟ್ಟರ್ ನಲ್ಲಿ ನಕಲು ಖಾತೆ ಸೃಷ್ಟಿಸಿ ದುರ್ಬಳಕೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಟ ಜಗ್ಗೇಶ್ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಅವರು ಮಾನ್ಯರೆ ನಿಮ್ಮ ಗಮನಕ್ಕೆ! ನನ್ನ ಖಾತೆ ನಕಲಿ ಪೋಟೋ ಶಾಪ್ ಮಾಡಿ ನಾನೆ ಹಾಕಿದಂತೆ ಜನರಿಗೆ ಗೊಂದಲ ಮೂಡಿಸುವ ಸಂದೇಶ ಹಾಕುತ್ತಿರುವ ಕಿಡಿಗೇಡಿಗಳ ಪತ್ತೆ ಹಾಗು ಕಾನೂನು ಕ್ರಮಕ್ಕೆ ಮಲ್ಲೇಶ್ವರ ಆರಕ್ಷ ಠಾಣೆ ಹಾಗೂ ಸೈಬರ್ ಕ್ರೈಂ ಗೆ ದೂರು ನೀಡಿದ್ದು, ದಯಮಾಡಿ ನನ್ನ ಹೆಸರಲ್ಲಿ ಕೆಟ್ಟಸಂದೇಶ ಬಂದರೆ ಸೇವ್ ಮಾಡಿ ನನ್ನ ಖಾತೆಗೆ ಲಗತ್ತಿಸಿ ಎಂದು ವಿನಂತಿ ಎಂದು ಟ್ವಿಟ್ ಮಾಡಿದ್ದಾರೆ.











