ಬೆಂಗಳೂರು: ಸುಮಲತಾ ಅವರ ಬಗ್ಗೆ ರೇವಣ್ಣ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟ್ ಮಾಡಿರುವ ನಟ ಜಗ್ಗೇಶ್ ಅವರು ರೇವಣ್ಣರವರೆ ನೀವು ಸಾಮಾನ್ಯ ಜನರಲ್ಲಾ, ಈ ದೇಶದ ಮಾಜಿ ಪ್ರಧಾನಿ ಮಗ. ಸಂವಿಧಾನ ಭಾರತದ ಎಲ್ಲಾ ಪ್ರಜೆಗು ವೈಯಕ್ತಿಕ ಅಭಿಪ್ರಾಯ ಮಂಡಿಸುವ ಹಕ್ಕು ನೀಡಿದೆ. ನಿಮ್ಮಮನೆಯ ಸದಸ್ಯರಾಗಿದ್ದರೆ ಹೀಗೆ ಮಾತಾಡುತ್ತಿದ್ದರ? ಅಂಬಿ ಮೌನವೆ ಜೆಡಿಎಸ್ ಪುಟ್ಟರಾಜ ಗೆದ್ದದ್ದು ಅಂತ ದೊಡ್ಡಗೌಡರೆ ಹೇಳಿದ್ದರು ನೆನಪಿಡಿ. ನನ್ನ ಪಕ್ಷ ಬೇರೆ ಆದರೆ ಸುಮಲತ ನನ್ನ ಉಧ್ಯಮದ ಹೆಣ್ಣು ಗೌರವಿಸಿ ಎಂದು ಟ್ವಿಟ್ ಮಾಡಿದ್ದಾರೆ.











