ಎನ್.ಆರ್.ಪುರ :ಅಬಕಾರಿ ಇಲಾಖೆ ಅಧಿಕಾರಿ ಹನುಮಂತಪ್ಪ ನೇತೃತ್ವದಲ್ಲಿ ದಾಳಿ, 11.50 ಲಕ್ಷ ರೂ ಮೌಲ್ಯದ ಮದ್ಯ ವಶ…

439
firstsuddi

ಚಿಕ್ಕಮಗಳೂರು : ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಹೊಡೆಯಾಲ ಗ್ರಾಮದಲ್ಲಿರುವ ಎಂ ಎಸ್ ಐ ಎಲ್ ಮೇಲೆ ಅಬಕಾರಿ ಇಲಾಖೆ ಅಧಿಕಾರಿ ದಾಳಿ ನಡೆಸಿ 11.50 ಲಕ್ಷ ರೂ ಮೌಲ್ಯದ ಮದ್ಯ ವಶ ಪಡಿಸಿಕೊಂಡಿರುವ ಘಟನೆ ನಡೆದಿದ್ದು, ವಲಯ ಅಬಕಾರಿ ಇನ್ಸ್‌ಪೆಕ್ಟರ್ ಹನುಮಂತಪ್ಪ ನೇತೃತ್ವದಲ್ಲಿ ದಾಳಿ ನಡೆಸಿದ್ದು, ತೆರಿಕೆ ಪಾವತಿಸಿದ ಮದ್ಯ ಮತ್ತು ಬಿಯರ್ ನೊಂದಿಗೆ ಹೆಚ್ಚುವರಿಯಾಗಿ ದೊರೆತ ಮದ್ಯವನ್ನು ವಶ ಪಡಿಸಿಕೊಳ್ಳಲಾಳ್ಳಲಾಗಿದೆ. ಎಂ ಎಸ್ ಐ ಎಲ್ ಸಿಬ್ಬಂದಿ ದರ್ಶನ್, ಅನಿಲ್ ಪರಾರಿಯಾಗಿದ್ದು, ಎನ್.ಆರ್.ಪುರ ವಲಯ ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.