ಮೂಡಿಗೆರೆ: ಇಂದಿನಿಂದ ವಾರದಲ್ಲಿ ಮೂರು ದಿನ ವಿದ್ಯುತ್ ವ್ಯತ್ಯಯ…

254

ಮೂಡಿಗೆರೆ : ಉಪ-ವಿಭಾಗ ವ್ಯಾಪ್ತಿಯ ಮೂಡಿಗೆರೆ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11ಕೆವಿ ಬಣಕಲ್, ದಾರದಹಳ್ಳಿ, ಗೋಣಿಬೀಡು ಫೀಡರ್‍ಗಳು ಓವರ್ ಲೋಡ್ ಆಗಿರುವುದರಿಂದ ಪ್ರತ್ಯೇಕ 11ಕೆವಿ ಎಕ್ಸ್‍ಪ್ರೆಸ್ ಫೀಡರನ್ನು ಎ.ಬಿ ಕೇಬಲ್(Aerial Bunched Cable)  ಮುಖಾಂತರ ಎಳೆಯಲು ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಮೂಡಿಗೆರೆ ಪಟ್ಟಣ ವ್ಯಾಪ್ತಿಯಲ್ಲಿ ಕಾಮಗಾರಿಯನ್ನು ನಿರ್ವಹಿಸುವ ಸಲುವಾಗಿ 15 ದಿನಗಳ ಕಾಲ ಅಂದರೆ 16-03-2019 ರಿಂದ 30-03-2019ರ ವರೆಗೆ 11 ಕೆವಿ ಮೂಡಿಗೆರೆ ಪಟ್ಟಣ ಫೀಡರ್‍ನಲ್ಲಿ ವಾರದಲ್ಲಿ 3 ದಿನ ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರ ವಿದ್ಯುತ್ ವ್ಯತ್ಯಯವಾಗುತ್ತದೆ ಎಂದು ಫಸ್ಟ್ ಸುದ್ದಿಗೆ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.