ಚಿಕ್ಕಮಗಳೂರು : ಪಿಡಬ್ಲ್ಯುಡಿ ಗುತ್ತಿಗೆದಾರನ ಮನೆ ಮೇಲೆ ಐಟಿ ದಾಳಿ…

179
firstsuddi

ಚಿಕ್ಕಮಗಳೂರು : ಇಂದು ಬೆಳಿಗ್ಗೆ ಸಚಿವ ಹಾಗೂ ಸಿಎಂ ಕುಮಾರಸ್ವಾಮಿ ಆಪ್ತರಾದ ಸಿ.ಎಸ್. ಪುಟ್ಟರಾಜು ಹಾಗೂ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರ ಆಪ್ತರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಇದರ ಬೆನ್ನೆಲೆ ಚಿಕ್ಕಮಗಳೂರಿನ ಪಿಡಬ್ಲ್ಯುಡಿ ಗುತ್ತಿಗೆದಾರನ ಮನೆಯ ಮೇಲೆಯೂ ಐಟಿ ದಾಳಿ ನಡೆದಿದೆ. ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆ ನಗರದ ಚನ್ನಾಪುರ ರಸ್ತೆಯಲ್ಲಿರುವ ಪ್ರಥಮ ದರ್ಜೆ ಗುತ್ತಿಗೆದಾರರಾದ ಸಿ.ಹೆಚ್.ವಿ.ಎನ್. ರೆಡ್ಡಿ ಅವರ ನಿವಾಸದ ಮೇಲೆ ಎರಡು ಕಾರಿನಲ್ಲಿ ಬಂದ ನಾಲ್ಕು ಅಧಿಕಾರಿಗಳ ತಂಡ ದಾಖಲೆ ಪತ್ರಗಳನ್ನು ಪರಿಶೀಲಿಸುತ್ತಿದ್ದಾರೆ.