ಸಿಎಂ ಕುಮಾರಸ್ವಾಮಿ ಅವರು ಮಗನ ಸೋಲಿಗೆ ಹೆದರಿದ್ದಾರೆ : ಬಿ.ಎಸ್. ಯಡಿಯೂರಪ್ಪ…

137
firstsuddi

ಬೆಳಗಾವಿ : ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮಂಡ್ಯ ಲೋಕಸಭಾ ಚುನಾವಣಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಅವರು ಪ್ರಚಾರ ಜೋರಾಗಿ ಮುಂದುವರಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರ ರದ್ದಾಗಲಿದ್ದು, ಈಗ ರದ್ದಾಗದಿದ್ದರೂ ಮುಂದೆ ಕೋರ್ಟ್‍ನಲ್ಲಿ ಆಗುತ್ತದೆ. ಸಿಎಂ ಕುಮಾರಸ್ವಾಮಿ ಅವರು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದು, ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರದಲ್ಲಿ ಲೋಪವಿದ್ದರು ಅದನ್ನು ಅವರೇ ಸರಿಪಡಿಸಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ಮಗನ ಸೋಲಿಗೆ ಹೆದರಿದ್ದಾರೆ ಎಂದು ಬಿ.ಎಸ್. ಯಡಿಯೂರಪ್ಪ ಅವರು ವಾಗ್ಧಾಳಿ ನಡೆಸಿದ್ದಾರೆ.