ಮಂಡ್ಯ : ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪದಲ್ಲಿ ನಡೆದ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಅವರ ವಿರುದ್ಧ ಸಂಸದ ಶಿವರಾಮೇಗೌಡ ಅವರು ಹೇಳಿಕೆ ನೀಡಿದ್ದು, ಸುಮಲತಾ ಟೂರಿಂಗ್ ಟಾಕಿಸ್, 18ರ ವರೆಗೂ ಶೂಟಿಂಗ್ ನಡೆಯುತ್ತದೆ. ಬಳಿಕ ಇವರನ್ನು ನೋಡಲು ಗಾಂಧಿನಗರಕ್ಕೆ ಹೋಗಬೇಕಾಗುತ್ತದೆ. ದರ್ಶನ್ ಪ್ರಚಾರಕ್ಕೆ ಬಂದವನಲ್ಲ ಅವನೂ ನಾಯ್ಡು, ಸುಮಲತಾನೂ ನಾಯ್ಡು ಹಾಗೂ ರಾಕ್ಲೈನ್ ವೆಂಕಟೇಶ್ ಕೂಡ ನಾಯ್ಡು ಮಂಡ್ಯವನ್ನು ನಾಯ್ಡು ಮಯ ಮಾಡಲು ಬಿಡಬಾರದು. ಟೂರಿಂಗ್ ಟಾಕಿಸ್ ಅವರನ್ನು 18ಕ್ಕೆ ಪ್ಯಾಕಪ್ ಮಾಡಿಸಿ ಕಳುಹಿಸಬೇಕು. ಆಮೇಲೆ ಸುಮಕ್ಕನೂ ಇಲ್ಲ, ಪಮಕ್ಕನೂ ಇಲ್ಲ. ಶೂಟಿಂಗ್ ಮಾಡಿದ ಸಿನಿಮಾ ಎಲ್ಲವೂ ಬಿಡುಗಡೆ ಆಗುವುದಿಲ್ಲ ಆಗೆಯೇ ಇದು ಕೂಡ ಬಿಡುಗಡೆ ಆಗುವುದಿಲ್ಲ ಎಂದು ಸುಮಲತಾ ಅವರ ವಿರುದ್ಧ ವಾಗ್ಧಾಳಿ ನಡೆಸಿದರು.










