ಕಡೂರು : ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಕ್ಷೇತ್ರದ ಅಭಿವೃದ್ಧಿಯಾಗುತ್ತದೆ. ಆದರೆ ಬಿಜೆಪಿಯವರ ಭವಿಷ್ಯ ಉಳಿಯಬೇಕಾದರೆ ಬಿಜೆಪಿಗೆ ಮತ ಹಾಕಬೇಕೆಂದಿದ್ದಾರೆ. ಜನರ ಅಭಿವೃದ್ಧಿಯಾಗಬೇಕೋ, ಅವರ ವೈಯಕ್ತಿಕ ಅಭಿವೃದ್ಧಿಯಾಗಬೇಕೋ ಎಂದು ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಬೆಂಗಳೂರಿನಿಂದ ಶಿವಮೊಗ್ಗ ಹೋಗುವ ಮಾರ್ಗ ಮಧ್ಯೆ ಕಡೂರಿನಲ್ಲಿ ಮಾತನಾಡಿದ ಅವರು ಬಿಜೆಪಿಯವರ ವಿರುದ್ಧ ವ್ಯಂಗ್ಯವಾಡಿ, ಯಾರೂ ಅಭಿವೃದ್ಧಿಯಾಗಬೇಕು ಅನ್ನೋದನ್ನು ಜನ ನಿರ್ಧರಿಸುತ್ತಾರೆ ಅಂದರು ಇದೇ ವೇಳೆ, ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಂಡಿರುವುದರಿಂದ ಯಾವ ಕ್ಷೇತ್ರದಲ್ಲೂ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಯಾರಿಗೂ ಸಮಸ್ಯೆಯಾಗುವುದಿಲ್ಲ ಎಂದರು.









