ಹಾಸನ : ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಈಗಿನ ರಾಜಕೀಯದಲ್ಲಿ ವೈಯಕ್ತಿಕವಾಗಿ ಟೀಕೆ ಮಾಡುತ್ತಾರೆ. ಐಟಿ ಸಂಸ್ಥೆಯ ಬಗ್ಗೆ ನಾನು ದೂರುವುದಿಲ್ಲ. ಆದರೆ ರಾಜಕೀಯವಾಗಿ ಐಟಿ ಸಂಸ್ಥೆಯನ್ನು ಬಳಸಿಕೊಳ್ಳುತ್ತಿರುವುದು ತಪ್ಪು. ಕಳೆದ ಐದು ವರ್ಷಗಳಿಂದ ನಾನು ನೋಡುತ್ತಿದ್ದೇನೆ. ನರೇಂದ್ರ ಮೋದಿಯವರ ಬಗ್ಗೆ ಯಾರು ಕಹಿಯಾಗಿ ಮಾತನಾಡುತ್ತಾರೆ ಅವರ ಮೇಲೆ ಕಣ್ಣಿಡುತ್ತಾರೆ. ಮೋದಿ ಬಗ್ಗೆ ಯಾರು ಟೀಕೆ ಮಾಡುತ್ತಾರೆ ಅವರನ್ನು ದೇಶ ಲೂಟಿ ಮಾಡುವವರು ಎನ್ನುತ್ತಾರೆ ಎಂದು ಐಟಿ ದಾಳಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.










