ಈ ಚುನಾವಣೆ ನನಗೆ ಒಂದು ಸವಾಲು ಇದ್ದಂತೆ, ನನ್ನ ಆತ್ಮವಿಶ್ವಾಸದಿಂದ ನಾನು ಈ ಹಾದಿಯಲ್ಲಿ ಹೊರಟಿದ್ದೇನೆ-ಸುಮಲತಾ ಅಂಬರೀಶ್…

211
firstsuddi

ಬೆಂಗಳೂರು : ಸುದ್ದಿಗಾರರೊಂದಿಗೆ ಮಾತನಾಡಿದ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಕಾಂಗ್ರೆಸ್ ನಾಯಕರೇ ಒತ್ತಾಯ ಮಾಡಿ ನನ್ನನ್ನು ರಾಜಕೀಯಕ್ಕೆ ಕರೆದುಕೊಂಡು ಬಂದರು. ಆದರೆ ಧೈರ್ಯ ಹೇಗೆ ಬಂತು ಎಂಬುವುದು ನನಗೆ ಗೊತ್ತಿಲ್ಲ. ಮನೆಯಲ್ಲಿ ಅಡುಗೆ ಮಾಡುವ ನಿನಗೆ ರಾಜಕೀಯದ ಬಗ್ಗೆ ನಿಂಗೆ ಏನು ಗೊತ್ತು ಎಂದು ಕೇಳಬಹುದು ಆದರೆ ಅವಳಿಗೂ ಜವಾಬ್ದಾರಿಗಳಿವೆ ಎಂದು ಹೇಳಿದ್ದು, ಅಂಬರೀಶ್ ಅವರು ನೇರ ನಡೆ ನುಡಿ ಹೊಂದಿದ್ದವರು ನನಗೆ ನನ್ನ ಪತಿಯೇ ಸ್ಪೂರ್ತಿ. ಅಂಬಿ ಎಲ್ಲವನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳುತ್ತಿದ್ದರು. ಹೀಗಾಗಿ ಮಂಡ್ಯ ಜನರು ಈಗಲೂ ಗೌರವವನ್ನು ಇಟ್ಟುಕೊಂಡಿದ್ದಾರೆ. ಭಾವನಾತ್ಮಕ ಸಂದರ್ಭದಲ್ಲೇ ಈ ಆಲೋಚನೆ ಬಂದಿದ್ದು, ಎಲ್ಲರಲ್ಲೂ ಅಭಿಪ್ರಾಯ ಸಂಗ್ರಹಿಸಿ ನಾನು ನಿರ್ಧಾರ ಕೈಗೊಂಡಿದ್ದೇನೆ.

ಜನರ ನಿರೀಕ್ಷೆಗಳೇನು ಎಂಬುವುದನ್ನು ಅರಿತುಕೊಂಡಿದ್ದೇನೆ. ನನ್ನನ್ನು ನಂಬಿರುವ ಜನರು ಮಂಡ್ಯದಲ್ಲಿ ಇದ್ದಾರೆ. ಬಡವರಿಗೆ ಮನೆ ಕಟ್ಟಿಸಿಕೊಡುವುದೇ ಒಂದು ಭಾಗ್ಯ. ಅಭಿವೃದ್ಧಿಯ ಹಾದಿಯಲ್ಲೇ ನಾನು ನಡೆಯಲು ಸಿದ್ಧನಿದ್ದೇನೆ. ಈ ಚುನಾವಣೆ ನನಗೆ ಒಂದು ಸವಾಲು ಇದ್ದಂತೆ, ನನ್ನ ಆತ್ಮವಿಶ್ವಾಸದಿಂದ ನಾನು ಈ ಹಾದಿಯಲ್ಲಿ ಹೊರಟಿದ್ದೇನೆ. ನಾನು ಆಯ್ಕೆಯಾದರೆ ಏನೂ ಮಾಡಬೇಕು ಎಂಬ ಕಲ್ಪನೆ ಇಟ್ಟುಕೊಂಡಿದ್ದೇನೆ. ನನ್ನ ರಾಜಕಾರಣ ಕಪ್ ಆಫ್ ಟೀ ಅಲ್ಲ, ಇದು ಕೂಡಾ ಆಕಸ್ಮಿಕ ಎಂದು ಹೇಳಿದ್ದಾರೆ.