ಸುಮಲತಾ ಅಂಬರೀಶ್ ಅವರು ಅನುದಾನದ ಬಗ್ಗೆ ಪಿಹೆಚ್‍ಡಿ ಮಾಡಬೇಕು: ಸಿ.ಎಸ್. ಪುಟ್ಟರಾಜು…

196
firstsuddi

ಮಂಡ್ಯ : ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಿ.ಎಸ್. ಪುಟ್ಟರಾಜು ಅವರು ಅಂಬರೀಶ್ ಅಣ್ಣ ಲೋಕಸಭಾ ಸದಸ್ಯರಾಗಿದ್ದಾಗ ಕೆಲಸ ಮಾಡುತ್ತಿದ್ದ ಜನರನ್ನು ಒಂದು ದಿನ ಕೂಡಾ ಬಂದು ನೋಡಲಿಲ್ಲ. ಸುಮಲತಾ ಅಂಬರೀಶ್ ಅವರು ಅನುದಾನದ ಬಗ್ಗೆ ಪಿಹೆಚ್‍ಡಿ ಮಾಡಬೇಕು. ಆದರೆ ಈಗ ಅವರು ಅನುದಾನ, ಗ್ರ್ಯಾಂಟ್ ಎಂದು ಹೇಳುತ್ತಾರೆ. ಅನುದಾನ ಎಂದರೆ ಏನು ಗ್ರ್ಯಾಂಟ್ ಎಂದರೆ ಏನೆಂದು ಅವರಿಗೆ ಗೊತ್ತಿಲ್ಲ. ಈ ಬಗ್ಗೆ ಪಾಠ ಕೇಳಲು ಜನರು ಸಿದ್ದರಿಲ್ಲ ಹಾಗೂ ಹೇಳಿಸಿಕೊಳ್ಳುವ ದುರ್ಗತಿಯೂ ಮಂಡ್ಯ ಜನರಿಗೆ ಇಲ್ಲ ಎಂದು ಹೇಳಿದ್ದಾರೆ.