ಚುನಾವಣೆ ತಂತ್ರ-ರಣತಂತ್ರ ಎಲ್ಲವೂ ಅವರದ್ದು, ನನ್ನದೇನಿದ್ದರು ಜನತಂತ್ರ : ಸುಮಲತಾ ಅಂಬರೀಶ್…

160
firstsuddi

ಮಂಡ್ಯ : ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ನಿನ್ನೆಯಷ್ಟೇ ನನ್ನನ್ನು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಬಿಜೆಪಿ ಅಭ್ಯರ್ಥಿ ಎನ್ನುತ್ತಿದ್ದು, ನಾಳೆ ಜೆಡಿಎಸ್ ಅಭ್ಯರ್ಥಿ ಎಂದು ಹೇಳಿದರೂ ಅಚ್ಚರಿಯಿಲ್ಲ. ನನ್ನ ಬಗ್ಗೆ ಏನೂ ಹೇಳಿಕೆ ನೀಡಲು ಸಿಗದಿದ್ದಾಗ ಈ ರೀತಿ ಹೇಳುತ್ತಿದ್ದಾರೆ. ಚುನಾವಣೆ ತಂತ್ರ-ರಣತಂತ್ರ ಎಲ್ಲವೂ ಅವರದ್ದು, ನನ್ನದೇನಿದ್ದರು ಜನತಂತ್ರ. ಲೋಕಸಭಾ ಚುನಾವಣೆಯಲ್ಲಿ ನಾನು ಗೆದ್ದರೆ ಮಂಡ್ಯಕ್ಕೆ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಿದ್ದರೆ ಚುನಾವಣೆಗೆ ನಾನು ಏಕೆ ನಿಲ್ಲುತ್ತಿದ್ದೆ. ಬಿಜೆಪಿ ನನಗೆ ಯಾವುದೇ ಷರತ್ತು ಹಾಕದೆ ಬೆಂಬಲ ನೀಡಿದೆ. ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದ್ದಾರೆ.