ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ: ಚಲುವರಾಯಸ್ವಾಮಿ…

194
firstsuddi

ಬೆಂಗಳೂರು : ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಚಲುವರಾಯಸ್ವಾಮಿ ಅವರು ಮಂಡ್ಯದಲ್ಲಿ ಯಾರೂ ಗೆಲ್ಲಬೇಕು ಎಂಬುವುದು ಜನರ ನಿರ್ಧಾರವಾಗಿದೆ. ಜನರ ತೀರ್ಪಿಗೆ ನಾವು ಬದ್ಧರಾಗಿದ್ದೇವೆ. ನಮ್ಮ ಇತಿ-ಮಿತಿಯೊಳಗೆ ನಾವು ಕೆಲಸ ಮಾಡುತ್ತೇವೆ.ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಬೈಎಲೆಕ್ಷನ್ ನಲ್ಲಿ ಶಿವರಾಮೇಗೌಡ ಅವರ ಪರ ಪ್ರಚಾರ ಮಾಡಿದ್ದೆವು, ಆದರೆ ಅವರ ಗೆಲುವಿನ ಬಳಿಕ ನಮ್ಮನ್ನು ಗೌರವದಿಂದ ಮಾತನಾಡಲಿಲ್ಲ. ಸಿ.ಎಸ್. ಪುಟ್ಟರಾಜು ಅವರು ಬಹಿರಂಗವಾಗಿ ನಮಗೆ ಅವಮಾನ ಮಾಡಿದರು. ಮಾಜಿ ಶಾಸಕ ನರೇಂದ್ರ ಸ್ವಾಮೀಜಿ ಅವರಿಗೆ ಅಗೌರವವನ್ನು ತೋರಿದರು. ಇಷ್ಟಾದರೂ ನಾವು ಸುಮ್ಮನಿದ್ದೇವೆ. ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದ ಅಭ್ಯರ್ಥಿ ಎಂದು ಅವರೇ ನಿರ್ಧರಿಸಿದ್ದು, ಇದರ ಬಗ್ಗೆ ನಮ್ಮ ಬಳಿ ಏನು ಕೇಳಲಿಲ್ಲ. ಹೀಗೆಲ್ಲಾ ಇರುವಾಗ ನಾವೇನು ಮಾಡಲು ಆಗುತ್ತೆ. ಮಂಡ್ಯದಲ್ಲಿ ಮೂವರು ಸುಮಲತಾ ಸ್ಪರ್ಧಿಸುತ್ತಿದ್ದು, ಈ ವಿಚಾರವಾಗಿ ಯಾರೂ ಏನೇ ಮಾಡಿದ್ದರು ಅದು ತಪ್ಪೇ. ಇದೆಲ್ಲಾ ರಾಜಕೀಯ ತಂತ್ರಗಾರಿಕೆ ಅಷ್ಟೇ, ಜನ ದಡ್ಡರಲ್ಲ. ಮಂಡ್ಯ ಜನರು ಎಲ್ಲವನ್ನು ನೊಡಿಯೇ ಮತ ಹಾಕುತ್ತಾರೆ.
ಯಶ್,ದರ್ಶನ್ ಅಂಬರೀಶ್ ಅವರ ಜೊತೆ ಬೆಳೆದ ಹುಡುಗರು. ಅಂಬರೀಶ್ ಅವರು ಬದುಕಿದ್ದಾಗ ಅವರ ಪರ ಪ್ರಚಾರಕ್ಕೆ ಹೋಗಿದ್ದರು. ಹೀಗಾಗಿ ಸುಮಲತಾ ಅವರ ಪ್ರಚಾರ ಮಾಡುತ್ತಿದ್ದಾರೆ. ಹೀಗಿರುವಾಗ ಸುಮಲತಾ ಅವರ ಪರ ಪ್ರಚಾರಕ್ಕೆ ಹೋಗದಿರಲು ಹೇಗೆ ಸಾಧ್ಯ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಗೀತಾ ಶಿವರಾಜ್‍ಕುಮಾರ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅವರ ಪರ ಅನೇಕ ಕಲಾವಿದರು ಪ್ರಚಾರ ಮಾಡಿದರು. ಆದರೆ ಈಗ ಕುಮಾರಸ್ವಾಮಿ ಅವರ ವಿರುದ್ಧ ಪ್ರಚಾರಕ್ಕೆ ಹೋಗುವುದು ಸೂಕ್ತವಲ್ಲ ಎಂದು ಹೇಳುತ್ತಿದ್ದಾರೆ. ನಾನು ಸುಮಲತಾ ಅವರ ಪರ ಪ್ರಚಾರ ಮಾಡಿಲ್ಲ. ಹೀಗಿದ್ದರೂ ಬೆನ್ನಿಗೆ ಚೂರಿ ಹಾಕಿದರು ಎಂದು ಹೇಳಿದ್ದಾರೆ. ಯಾರ ಬೆನ್ನಿಗೆ ಚೂರಿ ಹಾಕಿದೆವು ಎಂದು ಮುಖ್ಯಮಂತ್ರಿ ಅವರು ಹೇಳಲಿ. ಹಾಸನ, ಮೈಸೂರಿನಲ್ಲೂ ಮೈತ್ರಿ ಹೊಂದಾಣಿಕೆ ಸಾಧ್ಯವಿಲ್ಲ. ಮಂಡ್ಯ ಕ್ಷೇತ್ರದಲ್ಲಿ ಮೈತ್ರಿ ಧರ್ಮಪಾಲನೆ ಸರಿಯಾಗಿ ಆಗಿಲ್ಲ. ಹೆಚ್.ಡಿ. ದೇವೇಗೌಡ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರು ದೊಡ್ಡವರು ಅವರ ಹೇಳಿಕೆಗೆ ನಾನು ಪ್ರತಿಕ್ರಯಿಸುವುದಿಲ್ಲ. ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಸಿದ್ದರಾಮಯ್ಯ ಅವರ ಅವಶ್ಯಕತೆ ಇತ್ತು, ಹೀಗಾಗಿ ಅವರಲ್ಲಿ ಏನೇ ಭಿನ್ನಾಭಿಪ್ರಾಯವಿದ್ದರು ಅವರನ್ನು ಮಾತನಾಡಿಸುತ್ತಾರೆ. ಅವರಿಗೆ ನನ್ನ ಅವಶ್ಯಕತೆ ಇಲ್ಲ ಹಾಗಾಗಿ ನನ್ನನ್ನು ಮಾತನಾಡಿಸುವುದಿಲ್ಲ. ಕುಮಾರಸ್ವಾಮಿ ಹಾಗೂ ನಾನು ಒಂದೇ ತಟ್ಟೆಯಲ್ಲಿ ಊಟ ಮಾಡಿದ್ದೇವೆ. ಅವರ ಗುಣ ನನಗೆ ಗೊತ್ತಿದೆ ಅವರು ಯಾವುದೇ ಕಾರಣಕ್ಕೂ ನನ್ನ ಬಳಿ ಬರುವುದಿಲ್ಲ ಎಂದು ಹೇಳಿದ್ದಾರೆ.