ಮೋದಿಗೆ ಯಾಕೆ ವೋಟ್ ಹಾಕಬೇಕು ಎಂದು ಪ್ರಶ್ನಿಸಿದ ಪ್ರಜ್ವಲ್ ರೇವಣ್ಣ…

319

 

ಹಾಸನ : ಹೊಳೆನರಸೀಪುರ ತಾಲೂಕಿನ ಆಲಗೌಡನಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಮೋದಿಗೆ ಯಾಕೆ ವೋಟ್ ಹಾಕಬೇಕು. ಮೋದಿ.. ಮೋದಿ.. ಅನ್ನೋ ಭಾವನೆಯಲ್ಲಿರುವ ಯುವಕರು ಅರ್ಥೈಸಿಕೊಳ್ಳಬೇಕು. ವರ್ಷಕ್ಕೆ 2 ಕೋಟಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡ್ತೀನಿ ಅಂತಾ ಕಳೆದ ಪ್ರಣಾಳಿಕೆಯಲ್ಲಿಯೇ ಹೇಳಿದರು. ಐದು ವರ್ಷಕ್ಕೆ 5 ಕೋಟಿ ಉದ್ಯೋಗ ಸೃಷ್ಠಿ ಮಾಡಬೇಕಿತ್ತು. ಯಾರಾದರೂ ಒಬ್ಬ ಮೋದಿ ಹೆಸರೇಳಿ ಕೆಲಸಕ್ಕೆ ಹೋಗ್ತಿದ್ದೀರಾ?. ಸುಳ್ಳಿನ ಸುರಿಮಳೆಗಳನ್ನು ಹರಿಸೋದಲ್ಲ, ಸುಳ್ಳಿನ ಕೆರೆ, ಸುಳ್ಳಿನ ಸಮುದ್ರವನ್ನೇ ಸೇರಬೇಕು. ರೈತರ ಅಕೌಂಟ್ ಫ್ರೀಯಾಗಿ ಓಪನ್ ಮಾಡಿಸಿ ನಾನು 15 ಲಕ್ಷ ದುಡ್ಡು ಹಾಕ್ತೀನಿ ಅಂತಾ ಹೇಳಿದ್ದರು. ಆರು ತಿಂಗಳಿಗೆ ಹಾಕ್ತೀನಿ ಅಂತಾ ಹೇಳಿ ಐದು ವರ್ಷವಾದ್ರೂ ಒಂದು ರೂಪಾಯಿ ದುಡ್ಡು ಬಂದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಜ್ವಲ್ ರೇವಣ್ಣ ಅವರು ವಾಗ್ದಾಳಿ ನಡೆಸಿದರು.