ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ…

186
firstsuddi

ಬಂಟ್ವಾಳ :17ವರ್ಷದ ಮಗಳ ಮೇಲೆ ತಂದೆಯೇ ನಿರಂತರವಾಗಿ ಅತ್ಯಾಚಾರ ಎಸಗಿದ ಘಟನೆ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕುಕ್ಕಾಜೆಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಕುಕ್ಕಾಜೆ ನಿವಾಸಿ ದಾವೂದ್ ಅತ್ಯಾಚಾರ ಎಸಗಿದ ಆರೋಪಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ದಾವೂದ್ ತನ್ನ ಮೇಲೆ ಮೂರು ಬಾರಿ ಅತ್ಯಾಚಾರ ಮಾಡಿದ್ದಾರೆ. ಎರಡು ಬಾರಿ ಮನೆಯಲ್ಲಿ, ಒಂದು ಬಾರಿ ಮೆಲ್ಕಾರ್ ನ ಲಾಡ್ಜ್ ವೊಂದಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತ ಬಾಲಕಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾಳೆ.

ವೃತ್ತಿಯಲ್ಲಿ ಚಾಲಕನಾಗಿರುವ ಆರೋಪಿ ದಾವೂದ್ ಈ ಮೊದಲು ಪಾಣೆಮಂಗಳೂರು ನಿವಾಸಿಯಾಗಿದ್ದು, ಕೆಲ ವರ್ಷಗಳಿಂದ ಮಂಚಿಗೆ ಬಂದು ವಾಸವಾಗಿದ್ದಾನೆ. ಆತ ನಾಲ್ಕು ಮದುವೆಯಾಗಿದ್ದಾನೆಂದು ತಿಳಿದುಬಂದಿದ್ದು, 2ನೆ ಪತ್ನಿಯ‌ ಮಗಳ ಮೇಲೆ ಅತ್ಯಾಚಾರ ಎಸಗಿರುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.ಈ ಸಂಬಂಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.