ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅಪೂರ್ಣ ಆಸ್ತಿ ವಿವರ ಸಲ್ಲಿಕೆ ದೂರು ಪ್ರಕರಣ, ವಿಚಾರಣೆಗೆ ಹಾಜರಾಗಲಿರುವ ಎ ಮಂಜು…

159
firstsuddi

ಹಾಸನ : ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಅಪೂರ್ಣ ಆಸ್ತಿ ವಿವರ ನೀಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಎ ಮಂಜು ಅವರು ದೂರು ನೀಡಿದ್ದರು. ಪ್ರಜ್ವಲ್ ಅವರು ಬೆಂಗಳೂರು ಮೂಲದ ಎರಡು ಕಂಪನಿಯಲ್ಲಿ ಶೇಕಡಾ 25 ರಷ್ಟು ಹೂಡಿಕೆಯಿದ್ದರೂ ಈ ಬಗ್ಗೆ ಮಾಹಿತಿ ನೀಡದಿರುವ ಬಗ್ಗೆ ದೂರು ನೀಡಿದ್ದು, ದೂರಿನ ಹಿನ್ನೆಲೆಯಲ್ಲಿ ಇಂದು ಜಿಲ್ಲಾದಿಕಾರಿ ಹಾಗೂ ಚುನಾವಣಾಧಿಕಾರಿಯಿಂದ ವಿಚಾರಣೆ ನಡೆಯಲಿದ್ದು, ಮೊದಲಿಗೆ ದೂರು ದಾರರನ್ನೇ ವಿಚಾರಣೆಗೆ ಕರೆದಿದ್ದಾರೆ. ಎ ಮಂಜು ಅವರು ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ತಿಳಿದು ಬಂದಿದೆ.