ಬೆಂಗಳೂರು : ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರು ಎಳನೀರು ಕುಡಿದು ಸ್ಟ್ರಾ ಎಸೆಯುವುದರಿಂದ ಉಂಟಾಗುವ ಅನಾನುಕೂಲಗಳಿಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದಾರೆ. ನಿಖಿಲ್ ಗೌಡ ಸ್ಟ್ರಾ ಇಲ್ಲದೆ ಎಳನೀರು ಕುಡಿತಾನಂತೆ, ಕಾರಣ ಏನೇ ಇರಲಿ, ಇದನ್ನು ನಾವೆಲ್ಲ ಕಲಿಲೇಬೇಕು. ಯಾಕೆ ಗೊತ್ತಾ ? ಬೆಂಗಳೂರಿನಲ್ಲಿ ಪ್ರತಿದಿನ ಲಕ್ಷಾಂತರ ಸ್ಟ್ರಾ ಎಳನೀರು ಕುಡಿದು ಬಿಸಾಕ್ತಿವಿ. ಈ ಸ್ಟ್ರಾಗಳು ಮರುಸಂಸ್ಕರಣೆ ಮಾಡಲಾಗುವದಿಲ್ಲ. ನೀರಿಗೊ, ಕಾಡಿಗೊ, ಭೂಮಿಗೊ ಸೇರಿ ಮೂಕಪ್ರಾಣಿಗಳಿಗೆ ತೊಂದರೆ ಸ್ಟ್ರಾ ಉಪಯೋಗ ಬಿಟ್ಹಾಕೋಣ ಎಂದು ಟ್ವೀಟ್ ಮಾಡಿದ್ದಾರೆ.











