“ನಿಖಿಲ್ ಎಲ್ಲಿದ್ದೀಯಪ್ಪ” ಸಿನಿಮಾದಲ್ಲಿ ನಟಿಸಲು ನಾನು ರೆಡಿ ಇದ್ದೇನೆ : ತಾರಾ…

245
firstsuddi

ಬೆಳಗಾವಿ : ಸುದ್ದಿಗಾರೊಂದಿಗೆ ಮಾತನಾಡಿದ ಬಿಜೆಪಿ ಮಾಜಿ ಎಂಎಲ್‍ಸಿ ತಾರಾ ಅವರು ನನಗೆ ಒಳ್ಳೆಯ ಪಾತ್ರ ಸಿಕ್ಕಿದರೆ “ನಿಖಿಲ್ ಎಲ್ಲಿದ್ದೀಯಪ್ಪ” ಸಿನಿಮಾದಲ್ಲಿ ನಟಿಸಲು ನಾನು ರೆಡಿ ಇದ್ದೇನೆ. ನಿರ್ದೇಶಕರು ಚಿತ್ರದ ಕಥೆಯನ್ನು ಹೇಗೆ ಕಟ್ಟುತ್ತಾರೆ ಎಂಬುವುದು ಮುಖ್ಯ. ಚಿತ್ರದ ಟೈಟಲ್ ನಿಖಿಲ್ ಎಲ್ಲಿದ್ದೀಯಪ್ಪ ಎಂದು ಇದ್ದರೂ ತೊಂದರೆ ಇಲ್ಲ. ಚಿತ್ರದಲ್ಲಿ ನಿಖಿಲ್ ನಾಯಕ ನಟನಾಗಿ ನಟಿಸಿದರೂ ನಾನು ಚಿತ್ರದಲ್ಲಿ ನಟಿಸಲು ಸಿದ್ಧನಿದ್ದೇನೆ. ಮುಖ್ಯಮಂತ್ರಿ ಅವರು ಮಗನ ಸೋಲಿನ ಭಯದಲ್ಲಿ ನಟರ ಬಗ್ಗೆ ಈ ರೀತಿ ಮಾತನಾಡುತ್ತಿದ್ದಾರೆ. ಯಾರೇ ಆದರೂ ವೈಯಕ್ತಿಕ ವಿಷಯವನ್ನು ಪ್ರಸ್ತಾಪ ಮಾಡಬಾರದು ಎಂದು ಹೇಳಿದ್ದಾರೆ.