ನಾನು ನೋಡದ ಮೋದಿ ನಾ,ರೈತರನ್ನು ಕಡೆಗಣಿಸಿರೋ ವ್ಯಕ್ತಿಯನ್ನು ನೀವು ಪೊತ್ಸಾಹ ಮಾಡಬಾರದು: ಹೆಚ್.ಡಿ.ದೇವೇಗೌಡ…

189

ಚಿಕ್ಕಮಗಳೂರು : ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮದ್ವರಾಜ್ ಅವರ ಪರ ಪ್ರಚಾರ ಭಾಷಣದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಈಗಿನ ಯುವಕರು ಮೋದಿ ಮೋದಿ ಅಂತಾ ಹೇಳ್ತಾ ಇದ್ದಾರೆ.ನಾನು ನೋಡದ ಮೋದಿನಾ. ನಾನು ಪಾರ್ಲಿಮೆಂಟ್ ಹೋಗೋದು ಸತ್ಯ.ಮೋದಿ ಎದುರಿಸುವ ಕಿಚ್ಚು ಈ ರೈತನ ಮಗನಿಗೆ ಇದೆ. ಸ್ವರ್ಗವನ್ನು ಈ ದೇಶಕ್ಕೆ ತರುತ್ತೇನೆ ಎಂದ ಮನುಷ್ಯ ಈ ರೈತರಿಗೆ ಏನು ಮಾಡಿದ್ದಾರೆ.ಮೋದಿ ಸೈನಿಕರಿಗೆ ಶೂ, ಬಟ್ಟೆ ಜಾಕೇಟ್ ಇರಲಿಲ್ಲ, ನಾವು ಅದನ್ನು ನೀಡಿದ್ದೇವೆ ಅಂತಾ ಹೇಳ್ತಾ ಇದ್ದಾರೆ. ಹಾಗಾದ್ರೆ ವಾಜಪೇಯಿ ಇದ್ದಾಗ ಕಾರ್ಗಿಲ್ ಯುದ್ದ ಮಾಡುವಾಗ ನಮ್ಮ ಸೈನಿಕರಿಗೆ ಏನು ಇರಲಿಲ್ವಾ. ನಾವೇ ಸೈನಿಕರಿಗೆ ಎಲ್ಲವನ್ನು ನೀಡಿದ್ದೇವೆ ಅಂತಾ ಹೇಳುವವರಿಗೆ ನಾಚಿಗೆ ಆಗ್ಬೇಕು.ಚುನಾವಣೆಗೆ ಬೆಂಗಳೂರಿಗೆ ಡಬ್ಬ ಗಟ್ಟಲೆ ಹಣ ಬರ್ತಿದೆ.ಎಲ್ಲಿಂದ ಬರ್ತಿದೆ ಎಂದು ಗೊತ್ತಿಲ್ಲ.ಚುನಾವಣೆಗೆ ಬಿಜೆಪಿಯವರು ಹಣ ಹರಿಸುತ್ತಿದ್ದಾರೆ.ಮೋದಿ ಮಾತು ಎತ್ತಿದ್ರೆ ನಾವೇ ಮಾಡಿದ್ದು ಅಂತಾರೆ. ಮೋದಿ ಮನಸ್ಸಿಗೆ ಬಂದಾಗೆ ಮಾತಾನಾಡುತ್ತಾರೆ. ನಾವು ರೈತರ ಮಕ್ಕಳು, ನಾವು ಮೋಸ ಹೋಗಬಾರದು.ರೈತರ ಮಕ್ಕಳು ಕೂಡ ಮೋದಿ ಮೋದಿ ಅಂತಾರೆ. ನಾನು ನೋಡದ ಮೋದಿ ನಾ. ನಮ್ಮ ಯುವಕರು ಮೋಸ ಹೋಗಬಾರದು.ನಮ್ಮ ರೈತರನ್ನು ಕಡೆಗಣಿಸಿರೋ ವ್ಯಕ್ತಿಯನ್ನುನೀವು ಪೊತ್ಸಾಹ ಮಾಡಬಾರದು. ಸಿದ್ದರಾಮಯ್ಯ ಗೆ ಈ ದೇಶ ಆಳುವ ಯೋಗ್ಯತೆ ಇಲ್ವೇ.?ರೈತರ ಮಕ್ಕಳು ಮೋಸ ಹೋಗಬೇಡಿ.ದೇವರು ಲೋಕಸಭೆಗೆ ಹೋಗುವುದಕ್ಕೆ ನನಗೆ ಶಕ್ತಿ ಕೊಟ್ಟಿದ್ದಾನೆ. ಮೋದಿಯನ್ನು ಪಾರ್ಲಿಮೆಂಟ್ ಲ್ಲಿ ಎದುರಿಸುತ್ತೇವೆ.ಎಂದು ಮೋದಿ ವಿರುದ್ಧ ಗುಡುಗಿದ್ದಾರೆ. ಎಲ್ಲಾ ಸಮುದಾಯದ ಜನರಿಗೆ ಕೈ ಮುಗಿದು ಕೇಳುತ್ತೇನೆ ನಮ್ಮ ಅಭ್ಯರ್ಥಿ ಪ್ರಮೋದ್ ಮದ್ವರಾಜ್ ರನ್ನ ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದ್ದಾರೆ.