ನೀವು ಬದುಕಿರುವ ಶವಗಳು ನಿಮಗೆ ದಿಕ್ಕಾರವಿರಲಿ! : ಜಗ್ಗೇಶ್…

342
firstsuddi

ಬೆಂಗಳೂರು : ಹೆರಿಗೆಗೆ ಇನ್ನೂ ಕೆಲವೇ ಗಂಟೆಗಳಿದ್ದರೂ ಮತದಾನ ಮಾಡಲು ಬಂದಿದ್ದ ಗರ್ಭಿಣಿಯ ದೇಶಪ್ರೇಮವನ್ನು ಕಂಡು ನಟ ಜಗ್ಗೇಶ್ ಅವರು ಮತ ಹಾಕದೆ ಇರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಪ್ರಙ್ನಾವಂತ ಮುಖವಾಡದ ನಿಶ್ಪ್ರಯೋಜಕ ನತದೃಷ್ಟರಿಗಿಂತ ನೀವು ನನ್ನ ಕಣ್ಣಲ್ಲಿ ಶ್ರೇಷ್ಟ ಭಾರತೀಯಳಾಗಿ ಕಂಡಿರಿ ಸಹೋದರಿ!ನಿಮ್ಮಆದರ್ಶ ಮಾನದಂಡವಾಗಲಿ ತಂದೆತಾಯಿ ಸಂಸ್ಕೃತಿ ದೇಶ ಸರ್ವನಾಶವಾದರು ಸಹಿಸಿ ತಮ್ಮಸುಖ ಶ್ರೇಷ್ಟವೆಂದು ಮತಹಾಕದೆ ಮೋಜುಮಸ್ತಿಗಾಗಿಯೇ ಬದುಕುತ್ತಿರುವ ನತದೃಷ್ಟರಿಗೆ!ನೀವು ಬದುಕಿರುವ ಶವಗಳು ನಿಮಗೆ ದಿಕ್ಕಾರವಿರಲಿ! ಎಂದು ಟ್ವೀಟ್ ಮಾಡಿದ್ದಾರೆ.