ಮೂಡಿಗೆರೆ : ಕೊಟ್ಟಿಗೆಹಾರ ಗಂಗಾಮೂಲ ರಸ್ತೆ ಮಾಗುಂಡಿ ಮೂಲಕ ಹಾದು ಹೋಗಿದ್ದು ಹಾದಿಓಣಿ ಅರಣ್ಯ ವಸತಿಗೃಹದ ಸಮೀಪ ಎನ್.ಆರ್.ಪುರ ಮೂಲದ ಕಾರೊಂದು ತಿಂಗಳ ಹಿಂದೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು.
ಈ ಅಫಘಾತದಲ್ಲಿ ಕಾರು ನಜ್ಜುಗುಜ್ಜಾಗಿ ವಿದ್ಯುತ್ ಕಂಬ ತುಂಡಾಗಿ ಕಾರು ಜಖಂಗೊಂಡಿತ್ತು. ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದರು. ಸ್ಥಳಕ್ಕೆ ಬಂದ ಮೆಸ್ಕಾಂ ಅಧಿಕಾರಿಗಳು ಕಾರು ಮಾಲೀಕರಿಂದ ತುಂಡಾದ ಕಂಬ ಬದಲಿಸಲು ಏಳು ಸಾವಿರ ಹಣವನ್ನು ದಂಡವಾಗಿ ಪಡೆಯಲಾಗಿತ್ತು. ಘಟನೆ ನಡೆದು ತಿಂಗಳಾದರೂ ಮೆಸ್ಕಾಂ ಕಂಬ ಬದಲಿಸಲು ಮರೆತಂತೆ ಕಾಣುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ನವೀನ್ ಹಾವಳಿ, ಜೀವನ್, ಥೋಮಸ್ ಗಬ್ಗಲ್, ಮರ್ಕಲ್ ಸುರೇಶ್, ರಾಜೇಶ್ ಇದ್ದರು.ತುಂಡಾದ ಕಂಬವೂ ಹೆದ್ದಾರಿಗೆ ಹೊಂದಿಕೊಂಡಿದ್ದು ದಿನನಿತ್ಯ ನೂರಾರು ವಾಹನಗಳು ಈ ಮಾರ್ಗವಾಗಿ ಸಂಚರಿಸುತ್ತವೆ. ಈ ವಿದ್ಯುತ್ ಮಾರ್ಗವೂ ಹೈಟೆಂನ್ಷನ್ ವಿದ್ಯುತ್ ಮಾರ್ಗವಾಗಿದ್ದು ಪ್ರವಾಸಿಗರ ಬಲಿಗಾಗಿ ಕಾದಂತಿದೆ. ಪತ್ರಿಕೆಯೂ ಮೆಸ್ಕಾಂ ಅಧಿಕಾರಿ ಕೃಷ್ಣ ಅವರನ್ನು ಸಂಪರ್ಕಿಸಿದಾಗ ಅಪಘಾತವಾಗಿ ವಾಹನ ಮಾಲೀಕರು ದಂಡದ ರೂಪದಲ್ಲಿ 7 ಸಾವಿರದ ಚೆಕ್‍ನ್ನು ನೀಡಿದ್ದು ಆ ಚೆಕ್ ಬೌನ್ಸ್ ಆಗಿದೆ. ಕಂಬ ಬದಲಿಸಲು ತಡವಾಗಿದೆ. ಕೂಡಲೇ ಕಂಬವನ್ನು ಬದಲಿಸಲಾಗುವುದು ಎಂದು ತಿಳಿಸಿದ್ದಾರೆ.










