ಮಂಡ್ಯ : ಅಭಿಷೇಕ್ ಅಂಬರೀಶ್ ಅವರು ಇಂದು ಅಂಬರೀಶ್ ಅವರ ಅಭಿಮಾನಿಯೊಬ್ಬರ ಗೃಹಪ್ರವೇಶಕ್ಕೆ ಆಗಮಿಸಿದ್ದು, ಕಾರ್ಯಕ್ರಮ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ತಿಂಗಳು ನಮ್ಮ ಕುಟುಂಬಕ್ಕೆ ವಿಶೇಷವಾದದ್ದು, ಮೇ23 ಕ್ಕೆ ಅಮ್ಮನ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಮೇ29 ಕ್ಕೆ ಅಪ್ಪನ ಹುಟ್ಟುಹಬ್ಬ ಹಾಗೂ ನಾನು ನಟಿಸಿರುವ ಅಮರ್ ಸಿನಿಮಾ ತೆರೆಕಾಣಲಿದೆ. ನನ್ನ ಅಮರ್ ಸಿನಿಮಾಗಿಂತ ಮೇ 23ರ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆಯೇ ನನಗೆ ಜಾಸ್ತಿ ಕುತೂಹಲ ಇದೆ. ಅಭಿಮಾನಿಗಳು ಪ್ರೀತಿಯಿಂದ ಟೀ,ಕಾಫಿಗೆ ಕರೆಯುತ್ತಾರೆ. ಅವರು ಪ್ರೀತಿಯಿಂದ ಕರೆದಾಗ ಬರುತ್ತೇವೆ. ಚುನಾವಣೆಯ ಗೆಲುವಿಗಾಗಿ ಎಷ್ಟೇ ದೇವಾಲಯಗಳನ್ನು ಸುತ್ತಿದರೂ ಮತಯಂತ್ರದಲ್ಲಿ ಅಡಗಿರುವ ಫಲಿತಾಂಶದಲ್ಲಿ ಬದಲಾವಣೆಯಾಗುವುದಿಲ್ಲ. ನಾವು ಸರ್ವೆಗಳನ್ನು ಮಾಡಿಸಿಲ್ಲ ಆದರೆ ನಮಗೆ ಚುನಾವಣೆಯ ದಿನದಂದೇ ಫಲಿತಾಂಶ ಗೊತ್ತಾಗಿದೆ ಎಂದು ಹೇಳಿದ್ದಾರೆ.










