ಹುಟ್ಟಿದ ಮೂರೇ ದಿನಕ್ಕೆ ಹಾಲು ಕೊಡುವ ಮೇಕೆ ಮರಿ…

220
firstsuddi

ಬಾಗಲಕೋಟೆ : ಹುಟ್ಟಿದ ಮೂರೇ ದಿನಕ್ಕೆ ಹಾಲು ಕೊಡುವ ಮೇಕೆ ಮರಿಯೊಂದು ಪಶು ವೈದ್ಯರಿಗೆ ಅಚ್ಚರಿ ಮೂಡಿಸಿದ್ದು, ತಾಲ್ಲೂಕಿನ ತುಳಸಿಗೇರಿ ಎಂಬ ಗ್ರಾಮದ ಹನುಮಂತ ದಾಸನ್ನವರ ಎಂಬುವವರ ಮನೆಯಲ್ಲಿರುವ ಮೇಕೆ ಮರಿ ಹುಟ್ಟಿದ ಮೂರೇ ದಿನಕ್ಕೆ ಒಂದು ಕಪ್‍ನಷ್ಟು ಹಾಲು ನೀಡುತ್ತಿದೆ. ಈ ವಿಷಯವನ್ನು ತಿಳಿದ ಇಲಾಖೆ ಪ್ರಭಾರ ಡಿಡಿ ಡಾ.ಆರ್.ಎಸ್.ಪದ್ರಾ ನೇತೃತ್ವದಲ್ಲಿ ಅಧಿಕಾರಿಗಳು ಮೇಕೆಮರಿ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಅಧಿಕಾರಿಗಳು ಮೇಕೆ ಮರಿ ಹಾಲು ಕೊಡುವುದನ್ನು ಕಂಡು ಅಚ್ಚರಿಗೊಂಡಿದ್ದು, ಮೇಕೆ ಮರಿಯ 10ಎಂಎಂ ಹಾಲನ್ನು ಸಂಗ್ರಹಿಸಿ ಅಧ್ಯಯನ ಮಾಡಲು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ ಎನ್ನಲಾಗಿದೆ.