ಮೂಡಿಗೆರೆ : ತಾಲ್ಲೂಕಿನ ಅಂಗಡಿ ಗ್ರಾಮದ ದೊಡ್ಡಕೆರೆಯಲ್ಲಿ ಮೀನುಗಳು ಸತ್ತು ತೇಲುತ್ತಿದ್ದು, ಈ ಕೆರೆಯಲ್ಲಿ ನೂರಾರು ಜಾನುವಾರುಗಳು ದಿನನಿತ್ಯ ನೀರು ಕುಡಿಯುತ್ತಿದ್ದು, ಎರಡು ದಿನಗಳಿಂದ ಮೀನುಗಳು ಸತ್ತು ಹೋಗಿದ್ದು, ಯಾರಾದರೂ ವಿಷ ಹಾಕಿದ್ದಾರ ಎಂಬ ಅನುಮಾನಕ್ಕೆ ಕಾರಣವಾಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಈ ಬಗ್ಗೆ ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮೋಹನ್ ಜಾಣಿಗೆ ಸುಮಾರು 50ರಿಂದ 100 ಮೀನುಗಳು ಈಗಾಗಲೇ ಸತ್ತು ಹೋಗಿದ್ದು, ಕೆರೆಯ ಮಧ್ಯಭಾಗದಲ್ಲೂ ತೇಲುತ್ತಿವೆ. ಈ ಕೂಡಲೇ ಸಂಬಂಧಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.









